Webdunia - Bharat's app for daily news and videos

Install App

ಮುಖ್ಯಮಂತ್ರಿಯವರೇ ನೀವು ಬಹಳ ಸುಂದರವಾಗಿ ಕಾಣುತ್ತೀರಿ: 2 ವರ್ಷಗಳಲ್ಲಿ ಅಖಿಲೇಶ್‌ಗೆ ಬಂದಿದ್ದು 5 ಲಕ್ಷ ಪತ್ರ

Webdunia
ಗುರುವಾರ, 31 ಜುಲೈ 2014 (15:16 IST)
ಎರಡು ವರ್ಷಗಳ ಹಿಂದೆ ಉತ್ತರಪ್ರದೇಶದ  ಮುಖ್ಯಮಂತ್ರಿ ಗಾದಿಗೆ ಏರಿದ ಯುವನಾಯಕ ಅಖಿಲೇಶ್ ಯಾದವ್ ಜನತಾ ದರ್ಬಾರ್ ಮತ್ತು ಮುಖ್ಯಮಂತ್ರಿಗೆ ಪತ್ರ ಎಂಬ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದ ತರುವಾಯ ಅವರಿಗೆ ಬಂದ ಪತ್ರಗಳ ಸಂಖ್ಯೆ ಎಷ್ಟು ಗೊತ್ತಾ? ಬರೊಬ್ಬರಿ 5 ಲಕ್ಷ. 

ಮುಖ್ಯಮಂತ್ರಿ ಅಖಿಲೇಶ್ ಅವರ ಜನಪ್ರಿಯತೆಯಿಂದಾಗಿ ಪ್ರತಿನಿತ್ಯ ಸಾವಿರಾರು ಪತ್ರಗಳು ಬರುತ್ತಿವೆ. ಪ್ರತಿಯೊಂದು ಪತ್ರಕ್ಕೆ ಉತ್ತರ ನೀಡುವುದು ಮತ್ತು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಇದರಿಂದಾಗಿ ಮುಖ್ಯಮಂತ್ರಿಗಳು ಜಾರಿಗೊಳಿಸಿದ ಮುಖ್ಯಮಂತ್ರಿಗೆ ಪತ್ರ ಕಾರ್ಯಕ್ರಮ ಸಂಪೂರ್ಣವಾಗಿ ಸಫಲವಾಗುತ್ತಿಲ್ಲ ಎನ್ನುವುದೇ ಅಧಿಕಾರಿಗಳು ಕೊರಗಾಗಿದೆ. 
 
ತಮಾಷೆ ಎಂದರೆ  ಮುಖ್ಯಮಂತ್ರಿಗಳಿಗೆ ಬಂದ ಪತ್ರಗಳಲ್ಲಿ ಕೆಲವು ಅವರನ್ನು ಮದುವೆಯಾಗುವ ಪ್ರಸ್ತಾಪಗಳನ್ನು ಸಹ ಹೊಂದಿದ್ದವು. ಆ ಪತ್ರಗಳಲ್ಲಿ ಹೀಗೆ ಬರೆದಿತ್ತು-  ಮುಖ್ಯಮಂತ್ರಿಯವರೇ ನೀವು ಬಹಳ ಸುಂದರಾವಾಗಿ ಕಾಣುತ್ತೀರಿ, ನನ್ನನ್ನು ಮದುವೆಯಾಗುತ್ತೀರಾ?, ಮುಖ್ಯಮಂತ್ರಿಯವರೇ ನನ್ನ ಬಳಿ ಬೊಲೆರೋ ಗಾಡಿ ಇಲ್ಲ, ನೀವು ಕೊಡಿಸುತ್ತೀರಾ?, ಅಖಿಲೇಶ್ ಅಣ್ಣಾ ನಾನು ನಿಮ್ಮನ್ನು ಅಣ್ಣ ಎಂದುಕೊಂಡಿದ್ದೇನೆ. ನಾನು ನಿಮಗೆ ರಾಖಿ ಕಟ್ಟಬಹುದೇ?  
 
ಈ ಪತ್ರಗಳಿಗೆ ಉತ್ತರಿಸಲು ಸಹಾಯಕವಾಗುವಂತೆ, ಪತ್ರಗಳನ್ನೆಲ್ಲ  ಕಂಪ್ಯೂಟರೀಕೃತಗೊಳಿಸಲು ಹೊಸ ತಂತ್ರಾಂಶ ನಿರ್ವಹಣಾ ಸಂಸ್ಥೆಯ ಜತೆ ಸರಕಾರ ಒಪ್ಪಂದ ಮಾಡಿಕೊಂಡಿದೆ. ಪ್ರತಿಯೊಂದು ಪತ್ರಗಳನ್ನು ಶೀಘ್ರವಾಗಿ ಡಿಜಿಟಲೈಜ್ ಮಾಡಲು ಸಂಸ್ಥೆ ಒಂದು ಡಜನ್‌ಗಿಂತ ಹೆಚ್ಚು ಕಂಪ್ಯೂಟರ್ ವೃತ್ತಿಪರರನ್ನು ನೇಮಿಸಿಕೊಂಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments