Webdunia - Bharat's app for daily news and videos

Install App

ನೆಹರುರನ್ನು ಹೊಗಳಿದ್ದ ಜಿಲ್ಲಾಧಿಕಾರಿಗೆ ಮಧ್ಯಪ್ರದೇಶ ಸರಕಾರದಿಂದ ನೋಟಿಸ್ ಜಾರಿ

Webdunia
ಮಂಗಳವಾರ, 31 ಮೇ 2016 (14:47 IST)
ಪ್ರಧಾನಮಂತ್ರಿ ನರೇಂದ್ರ ವಿರುದ್ಧ ಜನತೆ ಬದಲಾವಣೆ ತರಬೇಕು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕುರಿತಂತೆ ವಿವರಣೆ ನೀಡಿ ಎಂದು ಬಾರ್ವಾನಿಯ ನಿರ್ಗಮಿತ ಜಿಲ್ಲಾಧಿಕಾರಿ ಐಎಎಸ್ ಅಧಿಕಾರಿ ಅಜಯ್ ಸಿಂಗ್ ಗಾಂಗ್ವರ್ ಅವರಿಗೆ ಮಧ್ಯಪ್ರದೇಶ ಸರಕಾರ ನೋಟಿಸ್ ಜಾರಿ ಮಾಡಿದೆ.
  
ಐಎಎಸ್ ಅಧಿಕಾರಿ ಅಜಯ್ ಸಿಂಗ್, ತಮ್ಮ ಫೇಸ್‌ಬುಕ್‌ನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹೊಗಳಿ, ಕೇಸರಿಪಡೆಗಳನ್ನು ತೆಗಳಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿರುವ ಬಿಜೆಪಿ ಸರಕಾರ ಆಕ್ರೋಶಗೊಂಡು ನೋಟಿಸ್ ಜಾರಿ ಮಾಡಿದೆ.   
 
ನೆಹರು ಅವರನ್ನು ಹೊಗಳಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಜಿಲ್ಲಾಧಿಕಾರಿ ಅಜಯ್ ಸಿಂಗ್ ಅವರನ್ನು ಸಚಿವಾಲಯದ ಉಪಕಾರ್ಯದರ್ಶಿಯಾಗಿ ವರ್ಗ ಮಾಡಿ ಸರಕಾರ ಆದೇಶ ಹೊರಡಿಸಿದೆ.
 
ಪ್ರಧಾನಿ ಮೋದಿ ವಿರುದ್ಧ ಜನಕ್ರಾಂತಿಯಾಗಬೇಕಾಗಿದೆ ಎನ್ನುವ ಫೇಸ್‌ಬುಕ್ ಪೋಸ್ಟ್‌ಗೆ ಅಜಯ್ ಸಿಂಗ್ ಲೈಕ್ ಮಾಡಿದ್ದರು ಎನ್ನಲಾಗಿದೆ.
 
ಫೇಸ್‌ಬುಕ್ ಪೋಸ್ಟ್‌ನಲ್ಲಿ 1947ರಲ್ಲಿ ಹಿಂದೂ ತಾಲಿಬಾನ್ ರಾಷ್ಟ್ರವಾಗಲು ಬಿಡಲಿಲ್ಲ ಎನ್ನುವುದು ನೆಹರು ತಪ್ಪು ಹೆಜ್ಜೆ, ಐಐಟಿ, ಇಸ್ರೋ, ಬಾರ್ಕ್, ಐಐಎಸ್‌ಬಿ, ಐಐಎಂ, ಬಿಎಚ್‌ಇಎಲ್, ಸ್ಟೀಲ್ ಪ್ಲಾಂಟ್, ಡ್ಯಾಮ್‌ಗಳು, ಥರ್ಮಲ್ ಪವರ್‌ ಕೇಂದ್ರಗಳನ್ನು ನಿರ್ಮಿಸಿದ್ದು ನೆಹರು ಮಾಡಿದ ತಪ್ಪಾಗಿದೆ ಎಂದು ಬರೆದು ಪೋಸ್ಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. 
 
ಜಿಲ್ಲಾಧಿಕಾರಿಯಾಗಿದ್ದ ಅಜಯ್ ಸಿಂಗ್ ಗಂಗ್ವಾರ್ ಅವರಿಗೆ ಕೆಲ ಸರಕಾರ ಅಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ,ಕೆಲವು ಹಿರಿಯ ಅಧಿಕಾರಿಗಳು ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments