Select Your Language

Notifications

webdunia
webdunia
webdunia
webdunia

ಸತ್ತ ಮಗಳು ಏಳುತ್ತಾಳೆಂದು 48 ಗಂಟೆ ಶವದ ಮುಂದೆ ಕಾದ ತಾಯಿ

ಸತ್ತ ಮಗಳು ಏಳುತ್ತಾಳೆಂದು 48 ಗಂಟೆ ಶವದ ಮುಂದೆ ಕಾದ ತಾಯಿ
ಕೋಲ್ಕತ್ತ , ಬುಧವಾರ, 20 ಏಪ್ರಿಲ್ 2016 (10:09 IST)
ತಾಯಿ ಪ್ರೀತಿಯೇ ಅಂತದ್ದು. ತನ್ನ ಮಕ್ಕಳೆಂದರೆ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾಳೆ ಅವಳು. ಅಂತಹದರಲ್ಲಿ ತನ್ನ ಕರುಳ ಕುಡಿ ತನ್ನ ಮುಂದೆಯೇ ಶವವಾದರೆ ಹೇಗೆ ಸಹಿಸಿಯಾಳು? ಕೋಲ್ಕತ್ತದ ನಿವಾಸಿಯಾಗಿರುವ ಆ ತಾಯಿಗೂ ಆದದ್ದು ಅದೇ. ಅವಳ ಕಣ್ಣ ಮುಂದೆಯೇ ಅವಳ ಮಗಳು ಸಾವನ್ನಪ್ಪಿದ್ದಾಳೆ. ಆದರೆ ಅವಳು ಸತ್ತಿದ್ದಾಳೆ ಎಂಬುದನ್ನು ಒಪ್ಪಲು ತಯಾರಿಲ್ಲದ ತಾಯಿ ಮಗಳ ಮೃತದೇಹ ಹಿಡಿದುಕೊಂಡು 48 ಗಂಟೆ ಕುಳಿತಿದ್ದಾಳೆ. 
 
ಕಳೆದೆರಡು ದಿನಗಳಿಂದ ಮಗಳು ಸಂಬ್ರಿತಾ ಚಕ್ರವರ್ತಿ (45) ಶವವನ್ನು ಅಪ್ಪಿ ಕುಳಿತಿದ್ದ ತಾಯಿ ಸುಜಾತಾ ಚಕ್ರವರ್ತಿ ‘ಮಗಳು ಮಲಗಿದ್ದಾಳೆ, ಸ್ವಲ್ಪ ಸಮಯದ ನಂತರ ಎದ್ದೇಳುತ್ತಾಳೆ ಎಂದು ಬಡಬಡಿಸುತ್ತಿದ್ದಳು. ಆಕೆ ಶವವನ್ನು ಬಿಟ್ಟುಕೊಡಲಾರಳು ಎಂಬುದು ಮನದಟ್ಟಾದ ಮೇಲೆ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 
 
ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

Share this Story:

Follow Webdunia kannada