Webdunia - Bharat's app for daily news and videos

Install App

ಹೆತ್ತ ಕರುಳ ಕೂಗಿಗೆ ಓಗೊಟ್ಟ ಉಗ್ರ ಮಾಡಿದ್ದೇನು?

Webdunia
ಶನಿವಾರ, 5 ನವೆಂಬರ್ 2016 (11:07 IST)
ಜಿಹಾದಿಗಳ ಪ್ರಭಾವಕ್ಕೆ ಒಳಗಾಗಿ ಮನೆ ತೊರೆದು ಭಯೋತ್ಪಾದಕ ಸಂಘಟನೆ ಸೇರಿದ್ದ ಉಗ್ರನೊಬ್ಬ ತಾಯಿಯ ಮಾತಿಗೆ ಮಣಿದು ಸಾಮಾನ್ಯ ಬದುಕಿಗೆ ಮರಳಿದ್ದಾನೆ.
 
ಜಮ್ಮು ಮತ್ತು ಕಾಶ್ಮೀರದ ನಿವಾಸಿ  ಉಮರ್ ಖಾಲಿಕ್ ಮಿರ್ ಅಲಿಯಾಸ್ ಸಮೀರ್(26) ಕಳೆದ ಮೇ ತಿಂಗಳಲ್ಲಿ ಮನೆ ಬಿಟ್ಟಿದ್ದ. ಲಷ್ಕರ್ ಸಂಘಟನೆ ಸೇರಿದ್ದ ಆತ ಇತ್ತೀಚಿಗೆ ಉತ್ತರ ಕಾಶ್ಮೀರದ  ಸೋಪೋರ್‌ನ ಮನೆಯಲ್ಲಿ ಅಡಗಿದ್ದ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು.  ಆತನನ್ನು ಸೆರೆ ಹಿಡಿಯಲು ಗುರುವಾರ ಬಿಎಸ್ಎಫ್ ಯೋಧರು ಕಾರ್ಯಾಚರಣೆಗೆ ಮುಂದಾದರು. ಈ ಮಾಹಿತಿ ದೊರೆಯುತ್ತಿದ್ದಂತೆ ಸಮೀಪದ ತುಜ್ಞರ್‌ನಲ್ಲಿ ವಾಸವಾಗಿದ್ದ ಆತನ ಪೋಷಕರು ಅಲ್ಲಿಗೆ ಧಾವಿಸಿದ್ದಾರೆ. 
 
ಆತ ಅಡಗಿದ್ದ ಮನೆ ಒಳಕ್ಕೆ ಹೋದ ತಾಯಿ  ಸತತ 2 ಗಂಟೆ ಕಾಲ ಆತನ ಜತೆ ಮಾತನಾಡಿ ಮನವೊಲಿಸಿದ್ದಾಳೆ. ಹೆತ್ತ ಕರುಳ ಕೂಗಿಗೆ ಓಗೊಟ್ಟ ಸಮೀರ್ ಸಾಮಾನ್ಯ ಜೀವನಕ್ಕೆ ಮರಳಲು ಮುಂದಾಗಿದ್ದಾನೆ. 
 
ಅಮ್ಮನ ಮಾತಿನಂತೆ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಭದ್ರತಾ ಪಡೆಗೆ ಶರಣಾಗಿದ್ದಾನೆ. ನಿಜಕ್ಕೂ ಇದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Rains: ಇಂದು ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಇಲ್ಲಿದೆ ಹವಾಮಾನ ವರದಿ

Covid 19: ಶ್ವಾಸಕೋಶ ಸಮಸ್ಯೆಯಿರುವವರಿಗೆ ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ

ಬಾಲಕಿಯ ಸಾವು ನನ್ನ ಮನಸ್ಸು ಕಲಕಿದೆ: ಎಚ್‌ಡಿ ಕುಮಾರಸ್ವಾಮಿ

COVID19: ಲಾಕ್ ಡೌನ್ ಬರುತ್ತಾ, ಶಾಲೆಗೆ ರಜೆ ಇರುತ್ತಾ: ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಏನಾಯ್ತು

Mangalore: ಇದು ಹೊಳೆ ಅಲ್ಲ ಪಂಪ್ ವೆಲ್ ಮಾರಾಯ್ರೆ.. ವೈರಲ್ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments