Select Your Language

Notifications

webdunia
webdunia
webdunia
webdunia

ದೇಶದಲ್ಲಿ 10,000ಕ್ಕಿಂತ ಹೆಚ್ಚು ಹಂದಿಜ್ವರದ ಪ್ರಕರಣಗಳು

ದೇಶದಲ್ಲಿ 10,000ಕ್ಕಿಂತ ಹೆಚ್ಚು ಹಂದಿಜ್ವರದ ಪ್ರಕರಣಗಳು
ನವದೆಹಲಿ , ಗುರುವಾರ, 19 ಫೆಬ್ರವರಿ 2015 (10:54 IST)
ದೇಶದಲ್ಲಿ ಹಂದಿ ಜ್ವರದ 10,000 ಪ್ರಕರಣಗಳು ವರದಿಯಾಗಿದ್ದು, 671 ಜನರು ಅದರಿಂದ ಮೃತಪಟ್ಟಿದ್ದಾರೆ. ಈಗ ನಾಗಾಲ್ಯಾಂಡ್‌ನಲ್ಲಿ ಪ್ರಕರಣಗಳು ವರದಿಯಾಗಿದೆ. ರಾಜಸ್ಥಾನದಲ್ಲಿ ಹಂದಿ ಜ್ವರಕ್ಕೆ 191 ಜನರು, ಗುಜರಾತಿನಲ್ಲಿ 155 ಜನರು ಮತ್ತು ಮಧ್ಯಪ್ರದೇಶದಲ್ಲಿ 90 ಜನರು ಮೃತಪಟ್ಟಿದ್ದಾರೆ. ಗುಜರಾತಿನಲ್ಲಿ ಹಂದಿ ಜ್ವರದ 255 ಹೊಸ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನದಲ್ಲಿ ಅತ್ಯಧಿಕವೆನಿಸಿದೆ.
 
ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹಂದಿ ಜ್ವರಕ್ಕೆ ಔಷಧಿಗಳ ಕೊರತೆಯಿಲ್ಲ ಮತ್ತು ಆಸ್ಪತ್ರೆಗಳು ಹಂದಿ ಜ್ವರ ನಿಭಾಯಿಸಲು ಸೂಕ್ತವಾಗಿ ಸಜ್ಜುಗೊಂಡಿವೆ ಎಂದು ಹೇಳಿದರು. ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಅವರು ಹೇಳಿದರು.

ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರವು ಹಂದಿ ಜ್ವರದ ಪರೀಕ್ಷೆ ವೆಚ್ಚವನ್ನು 4500 ರೂ.ಗೆ ನಿಗದಿ ಮಾಡಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ದರಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ.

Share this Story:

Follow Webdunia kannada