ಪಶ್ಚಿಮಬಂಗಾಳ ಗಡಿ ಮೂಲಕ 2000ಕ್ಕೂ ಅಧಿಕ ಮಂದಿ ಜಿಹಾದಿಗಳು ಭಾರತಕ್ಕೆ ನುಸುಳಿರುವುದಾಗಿ ಬಾಂಗ್ಲಾದೇಶ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಮಹತ್ವದ ಮಾಹಿತಿ ರವಾನಿಸಿದೆ.
ಹರ್ಕತ್ ಉಲ್ ಜಿಹಾದಿ ಅಲ್ ಇಸ್ಲಾಮಿ ಮತ್ತು ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆಯ ುಗ್ರರು ಗಡಿ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾಗೆ ನುಸುಳಿದ್ದಾರೆ. ಸುಮಾರು 2,010 ಹೂಜಿ ಮತ್ತು ಸೆಎಂಜಿ ಉಗ್ರರ ಪೈಕಿ 720 ಮಂದಿ ಬಂಗಾಳಕ್ಕೆ ಮತ್ತು ಉಳಿದ 1290 ಮಂದಿ ಅಸ್ಸಾಂ ಮತ್ತು ತ್ರಿಪುರಾಗೆ ನುಸುಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗೃಹ ಇಲಾಖೆಗೆ ಬಂದಿದೆ ಎನ್ನಲಾದ ಈ ವರದಿ ಅಕ್ಷರಶಃ ಪಶ್ಚಿಮ ಬಂಗಾಳ ಸರ್ಕಾರದ ನಿದ್ದೆಗೆಡಿಸಿದೆ. ಉಗ್ರರ ನುಸುಳುವಿಕೆಯ ಪ್ರಮಾಣ ಆತಂಕಕಾರಿಯಾಗಿದ್ದು, ತನಿಖೆ ಚುರುಕುಗೊಂಡಿದೆ. ಅಸ್ಸಾಂ ಪೊಲೀಸರು ಸಹ ಗಡಿಯಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ.