Select Your Language

Notifications

webdunia
webdunia
webdunia
webdunia

ಪ್ರಾಮಾಣಿಕತೆಗೆ ಸಂದ ಫಲ: 23 ವರ್ಷದಲ್ಲಿ 45 ಬಾರಿ ವರ್ಗಾವಣೆ

ಪ್ರಾಮಾಣಿಕತೆಗೆ ಸಂದ ಫಲ: 23 ವರ್ಷದಲ್ಲಿ 45 ಬಾರಿ ವರ್ಗಾವಣೆ
ಚಂದೀಗಡ್ , ಗುರುವಾರ, 2 ಏಪ್ರಿಲ್ 2015 (12:42 IST)
ಕಾಂಗ್ರೆಸ್ ಅಧ್ಯಕ್ಷೆ ಅಳಿಯ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾರ ಭೂ ಅಕ್ರಮ ಬಯಲಿಗೆಳೆದಿದ್ದ ಐಎಎಸ್ ಅಧಿಕಾರಿ  ಮತ್ತೆ ವರ್ಗಾವಣೆಯಾಗಿದ್ದಾರೆ. 

23 ವರ್ಷಗಳ ವೃತ್ತಿ ಜೀವನದಲ್ಲಿ ಅವರನ್ನು 45 ಬಾರಿ ವರ್ಗಾವಣೆ ಮಾಡಲಾಗಿದೆ.
 
ಹರಿಯಾಣದ ಬಿಜೆಪಿ ಸರಕಾರ ಈ ಕ್ರಮವನ್ನು ಕೈಗೊಂಡಿದೆ. ಸಾರಿಗೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಅಷ್ಟೇನೂ ಮಹತ್ವವಲ್ಲದ ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯ ವಿಭಾಗದ ನಿರ್ದೇಶಕರಾಗಿ ನೇಮಿಸಲಾಗಿದೆ. 
 
ಈ ಕುರಿತು  ತೀವೃ ನೋವನ್ನು ವ್ಯಕ್ತಪಡಿಸಿರುವ 49 ವರ್ಷದ ಅಧಿಕಾರಿ ಖೇಮ್ಕಾ, ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಮತ್ತು ಸಾರಿಗೆ ಇಲಾಖೆಯಲ್ಲಿ  ಸುಧಾರಣೆ ತರಲು ಕಠಿಣವಾಗಿ ಪ್ರಯತ್ನಿಸಿದೆ. ಈ ಕ್ಷಣ ಅತಿ ವೇದನಿಯವಾಗಿದೆ. ವಾದ್ರಾ ಅವರ ಹಗರಣ ಬಯಲಿಗೆಳೆಯುವಾಗ ತಮ್ಮನ್ನು  ಬೆಂಬಲಿಸಿದ್ದ ಬಿಜೆಪಿಯ ಈ ಕ್ರಮ ತಮಗೆ ಬೇಸರವನ್ನುಂಟು ಮಾಡಿದೆ ಎಂದು ಟ್ವಿಟ್ ಮಾಡಿದ್ದಾರೆ. 
 
ಹರಿಯಾಣ ಸರಕಾರದ ಆರೋಗ್ಯ ಸಚಿವರಾದ ಅನಿಲ್ ವಿಜ್ಹ್ ಮಾತ್ರ ಖೇಮ್ಕಾ ಬೆಂಬಲಕ್ಕೆ ನೀಂತಿದ್ದು, "ನಾನು ಅವರ ಜತೆಗಿದ್ದೇನೆ. ವರ್ಗಾವಣೆಯ ಕುರಿತಂತೆ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ. ಖೇಮ್ಕಾ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಾದ ಭೃಷ್ಟಾಚಾರವನ್ನು ವಿರೋಧಿಸಿ ಬಹಳಷ್ಟು ಕೆಲಸ ಮಾಡಿದ್ದಾರೆ", ಎಂದು ಹೇಳಿದ್ದಾರೆ. 
 
ಆದರೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ ಇದು ನಿಯಮಿತ ವರ್ಗಾವಣೆ ಎಂದಿದೆ. ಇತರ ಎಂಟು ಐಎಎಸ್ ಅಧಿಕಾರಿಗಳು ಸಂಜೆ ನಿನ್ನೆ ಸಂಜೆ ವರ್ಗಾವಣೆಗೊಂಡಿದ್ದಾರೆ. 

Share this Story:

Follow Webdunia kannada