Select Your Language

Notifications

webdunia
webdunia
webdunia
webdunia

ಶಿಕ್ಷಕಿಯಿಂದ 6 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ!

ಶಿಕ್ಷಕಿಯಿಂದ 6 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ!
ಬೆಂಗಳೂರು , ಶನಿವಾರ, 22 ನವೆಂಬರ್ 2014 (09:40 IST)
ಬೆಂಗಳೂರಿನಲ್ಲಿ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದರ ಹಿಂದೊಂದರಂತೆ ಬೆಳಕಿಗೆ ಬರುತ್ತಿವೆ. ಪುರುಷ  ಶಿಕ್ಷಕರು,ಶಾಲಾ ಸಿಬ್ಬಂದಿ, ಶಾಲಾ ವಾಹನ ಚಾಲಕರಿಂದ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇದು ಮಹಿಳಾ ಸಿಬ್ಬಂದಿಯಿಂದ ಶೋಷಣೆ ನಡೆದ ಪ್ರಕರಣ.  ಆರ್ ಟಿ ನಗರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ 6 ವರ್ಷದ ವಿದ್ಯಾರ್ಥಿನಿಯ ಮೇಲೆ ಆಕೆಯ ಶಿಕ್ಷಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ ಎಂದು ದೂರು ದಾಖಲಾಗಿದೆ.

ತಮ್ಮ ಮಗಳ ಮೇಲೆ ಆಕೆಯ ಶಿಕ್ಷಕಿ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆಕೆಯ ತಂದೆ-ತಾಯಿಗಳು ಕಳೆದ ಭಾನುವಾರ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಂದು ಶಾಲೆಗೆ ರಜೆಯನ್ನು ಘೋಷಿಸಲಾಗಿದ್ದು, ಆಡಳಿತ ಮಂಡಳಿಯ ಈ ನಡೆ ಅನೇಕ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
 
ಬಾಲಕಿ ವಿಚಾರಣೆ ವೇಳೆ ಆಕೆ ತನ್ನ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಇವರೇ ಕಾರಣ ಶಿಕ್ಷಕಿಯ ಕಡೆ ಬೆರಳು ತೋರಿಸುತ್ತಿದ್ದಾಳೆ. ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ರೀತಿಯ ಲೈಂಗಿಕ ಶೋಷಣೆ ನಡೆದಿಲ್ಲ ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಆದರೆ ಮಗುವಿನ ಮೇಲೆ ಹಲ್ಲೆ ನಡೆದಿರುವುದು ಸ್ಪಷ್ಟವಾಗಿದೆ. ಮಗುವಿನ ಖಾಸಗಿ ಭಾಗದ ಬಳಿ ಗಾಯಗಳಾಗಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.  
 
ಶೋಷಣೆ ನಡೆದಿದೆಯೋ ಇಲ್ಲವೋ, ಆದರೆ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದು ಸಹ ರೇಪ್ ಪ್ರಯತ್ನ ಪ್ರಕರಣವಾಗುವುದಾದರಿಂದ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಘಟನೆಯ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Share this Story:

Follow Webdunia kannada