Webdunia - Bharat's app for daily news and videos

Install App

ಇಂದು ಮೋದಿ ಜನ್ಮದಿನ: ದಾಖಲಾಗಲಿದೆ 3 ಗಿನ್ನಿಸ್, 1 ರಾಷ್ಟ್ರೀಯ ದಾಖಲೆ

Webdunia
ಶನಿವಾರ, 17 ಸೆಪ್ಟಂಬರ್ 2016 (10:31 IST)
ಪ್ರಧಾನಿ ಮೋದಿ ಇಂದು ತಮ್ಮ  66ನೆಯ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು ಈ ದಿನ ಮೂರು ಗಿನ್ನಿಸ್ ದಾಖಲೆ ಮತ್ತು ಒಂದು ರಾಷ್ಟ್ರೀಯ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. 
ಪ್ರತಿಬಾರಿಯಂತೆ ಮೊದಲು ಗಾಂಧಿನಗರಕ್ಕೆ ತೆರಳಿ ಹೆತ್ತ ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ಕೈಯ್ಯಿಂದ ಸಿಹಿ ತಿಂದು ಕುಟುಂಬದ ಜತೆ ಸ್ವಲ್ಪ ಸಮಯ ಕಳೆದರು. ಈ ದಿನವನ್ನೆಲ್ಲ ಪ್ರಧಾನಿ ವಿಶೇಷವಾಗಿ ಕಳೆಯಲಿದ್ದಾರೆ. ತಮ್ಮ ನಾಯಕನ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ಗುಜರಾತ್‌ನ ಬಿಜೆಪಿ ಸರ್ಕಾರ ಕೂಡ ಭರದ ತಯಾರಿ ನಡೆಸಿದೆ. 
 
ಈ ದಿನ ಎಂದಿಗೂ ಮರೆಯಲಾಗದ ದಿನವಾಗುವ ಸಾಧ್ಯತೆಗಳಿವೆ. ವಿವಿಧ ಸಂಸ್ಥೆಗಳು ಪ್ರಧಾನಿ ಮೋದಿ ಜನ್ಮದಿನಾಚರಣೆಯನ್ನು ಮೂರು ಗಿನ್ನಿಸ್ ದಾಖಲೆ ಮತ್ತು ಒಂದು ರಾಷ್ಟ್ರೀಯ ದಾಖಲೆಯನ್ನಾಗಿಸುವ ಗುರಿಯನ್ನು ಹೊಂದಿವೆ.
 
ಗುಜರಾತ್ ಸರ್ಕಾರ ನವಸರಿ ಜಿಲ್ಲೆಯಲ್ಲಿ ಆಯೋಜಿಸಿಕೊಂಡಿರುವ ಕಾರ್ಯಕ್ರಮದಲ್ಲಿ 11,223 ಮಂದಿ ದಿವ್ಯಾಂಗರಿಗೆ 17,000 ಕಿಟ್ ನೀಡಲು ನಿರ್ಧರಿಸಿದೆ. ಜತೆಗೆ ಕಾಲಿಲ್ಲದ 1,000 ಜನರಿಗೆ ವ್ಹೀಲ್ ಚೇರ್ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿದೆ. ಈ ಮೊದಲು ಅಮೇರಿಕಾದಲ್ಲಿ (2010) 346 ದಿವ್ಯಾಂಗರಿಗೆ ವ್ಹೀಲ್ ಚೇರ್ ನೀಡಲಾಗಿತ್ತು. 
 
ಜತೆಗೆ ಕಿವಿ ಕೇಳದ 1,000 ಮಂದಿಗೆ ಕಿವಿಗೆ ಹಾಕುವ ಯಂತ್ರವನ್ನು ನೀಡಲಾಗುತ್ತದೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಈ ದಾಖಲೆಯನ್ನು ಮಾಡಲಾಗಿತ್ತು. 
 
ಕೊನೆಯದಾಗಿ ಒಂದೇ ಸ್ಥಳದಲ್ಲಿ 1,500 ಎಣ್ಣೆ ದೀಪಗಳನ್ನು ಉರಿಸುವ ದಾಖಲೆಯನ್ನು ಮಾಡುವ ಗುರಿ ಹೊಂದಲಾಗಿದೆ. ಈ ಎಲ್ಲ ದಾಖಲೆಗಳು ಗಿನ್ನಿಸ್ ವರ್ಡ್ ರೆಕಾರ್ಡ್ ಅಧಿಕಾರಿಗಳ ಸಮಕ್ಷಮದಲ್ಲಿಯೇ ನಡೆಯಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಹಣೆಗೆ ತಿಲಕವಿಟ್ಟು ಆಪರೇಷನ್ ಸಿಂದೂರಕ್ಕೆ ಜೈ ಎಂದ ಸಿದ್ದರಾಮಯ್ಯ

Operation Sindoora: ಭಾರತದ ವಿರುದ್ದ ಛೂಬಿಡುತ್ತಿದ್ದ ಪಾಕ್‌ಗೆ ಎಚ್ಚರಿಕೆ ಗಂಟೆ ಎಂದ ಸಿದ್ದರಾಮಯ್ಯ

Trissur Pooram: ತ್ರಿಶ್ಶೂರ್ ಪೂರಂನಲ್ಲಿ ರೊಚ್ಚಿಗೆದ್ದ ಆನೆ ವಿಡಿಯೋ ವೈರಲ್: ಹಲವರಿಗೆ ಗಾಯ

Operation Sindoor: ದಾಳಿ ಮಾಡಿ ಗಂಟೆಯೊಳಗೆ ಭಾರತ ನಮಗೆ ಶರಣಾಗಿದೆ, ಬಿಳಿ ಬಾವುಟ ನೆಟ್ಟಿದೆ: ಕೊಚ್ಚಿಕೊಂಡ ಪಾಕಿಸ್ತಾನ ಸೇನೆ

Operation Sindoor: ಉಗ್ರರನ್ನು ಕೊಂದಿದ್ದಕ್ಕೆ ಪಾಕಿಸ್ತಾನಕ್ಕೆ ಸಿಟ್ಟು, ಭಾರತೀಯ ನಾಗರಿಕರ ಮೇಲೆ ದಾಳಿ, 10 ಮಂದಿ ಸಾವು

ಮುಂದಿನ ಸುದ್ದಿ
Show comments