Select Your Language

Notifications

webdunia
webdunia
webdunia
webdunia

ಮುಲಾಯಂ ಜನ್ಮದಿನಕ್ಕೆ ಮೋದಿ ಶುಭಾಶಯ

ಮುಲಾಯಂ ಜನ್ಮದಿನಕ್ಕೆ ಮೋದಿ ಶುಭಾಶಯ
ನವದೆಹಲಿ , ಶನಿವಾರ, 22 ನವೆಂಬರ್ 2014 (14:27 IST)
ತಮ್ಮ 75 ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. "ದೀರ್ಘ ಮತ್ತು ಆರೋಗ್ಯಕರ ಜೀವನ" ನಿಮ್ಮದಾಗಿರಲಿ  ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹಾರೈಸಿದ್ದಾರೆ. 

"ಮುಲಾಯಂ ಸಿಂಗ್ ಯಾದವ್ ಜಿ ಜನ್ಮದಿನವಾದ ಇಂದು ನನ್ನ ಕಡೆಯಿಂದ ಅವರಿಗೆ ಶುಭಾಶಯಗಳನ್ನು ಕೋರಲು ಸಂತೋಷವಾಗುತ್ತಿದೆ. ದೀರ್ಘ ಮತ್ತು ಆರೋಗ್ಯಕರ ಜೀವನ ಅವರದಾಗಿರಲಿ ಎಂದು ನಾನು ಪ್ರಾರ್ಥಿಸುತ್ತಿದ್ದೇನೆ," ಎಂದು ಮೋದಿ ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
 
ನವೆಂಬರ್ 22, 1939ರಲ್ಲಿ ಜನಿಸಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ  ಇಂದು ತಮ್ಮ  75 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.  ಮಧ್ಯರಾತ್ರಿ 12 ಗಂಟೆಗೆ 75 ಅಡಿ ಉದ್ದದ ಕೇಕ್ ಕತ್ತರಿಸುವ ಮೂಲಕ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 

Share this Story:

Follow Webdunia kannada