Daily Horoscope
✕

ಗುಜರಾತ್: ಮೋದಿ ಅಲೆಗೆ ಕೊಚ್ಚಿಹೋದ ಕಾಂಗ್ರೆಸ್

Webdunia
ಶುಕ್ರವಾರ, 16 ಮೇ 2014 (11:35 IST)
ದೇಶದಲ್ಲಿ ಮೋದಿ ಅಲೆ ಎಲ್ಲಿಯೂ ಇಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದ ವಿರೋಧಿಗಳಿಗೆ ನರೇಂದ್ರ ಮೋದಿಯವರು ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಸತತ 15 ವರ್ಷಗಳಿಂದ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಮೋದಿ, ತನ್ನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡಸಹಿತ ಕಿತ್ತೊಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
 
ಈಗಾಗಲೇ ವಡೋದರಾದಲ್ಲಿ ಮೋದಿ ಗೆಲುವನ್ನು ದಾಖಲಿಸಿದ್ದು, ರಾಜ್ಯದ ಇತರ ಎಲ್ಲಾ 25 ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷವು ಭಾರಿ ಮುನ್ನಡೆಯನ್ನು ಸಾಧಿಸುತ್ತಿದ್ದರೆ, ವಿರೋಧ ಪಕ್ಷದ ಪ್ರತಿಸ್ಪರ್ಧಿಗಳಲ್ಲಿ ಹೆಚ್ಚಿನವರು ಠೇವಣಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
 
ದೇಶದಾದ್ಯಂತ ನಿಚ್ಚಳ ಬಹುಮತ ಪಡೆಯಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಹಿಂದಿನ ಯಾವುದೇ ಚುನಾವಣೆಗಳಲ್ಲಿಯೂ ದಕ್ಕದ ಜನತಾ ತೀರ್ಪು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದೆ ಎಂದರೆ ಅತಿಶಯೋಕ್ತಿಯಾಗಲಾರದು.
 
ಮೋದಿಯನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದ ಹಲವಾರು ನಾಯಕರು ಮುಖ್ಯವಾಹಿನಿಗೆ ಇನ್ನೂ ತಮ್ಮ ಮುಖ ದರ್ಶನವನ್ನೇ ತೋರಿಸಿಲ್ಲ. ಹಲವಾರು ಘಟಾನುಘಟಿ ನಾಯಕರು ಮೋದಿ ಅಲೆಯಲ್ಲಿ ಕೊಚ್ಚಿ ಹೋಗುವ ದಟ್ಟ ಕಾರ್ಮೋಡಗಳು ವಿರೋಧಿಗಳ ಮೇಲೆ ಆವರಿಸಿವೆ. ಸ್ವತಃ ಕಾಂಗ್ರೆಸ್ ಪಕ್ಷದ ಯುವರಾಜರೇ (ರಾಹುಲ್ ಗಾಂಧಿ) ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಏನೇ ಆದರೂ ದೇಶದಾದ್ಯಂತ ಮೋದಿ ಅಲೆಯಿದೆ ಎಂಬುದು ಜನತಾ ತೀರ್ಪಿನಲ್ಲಿ ನಿಕ್ಕಿಯಾಗಿದೆ. 
 
ಕಟುಟೀಕೆಗಳನ್ನಾಡಿದ್ದ ವಿರೋಧಿಗಳು ಮುಂದೆ ಯಾವ ಹೇಳಿಕೆಯನ್ನು ನೀಡುತ್ತಾರೆಂಬುದೇ ಸದ್ಯ ಮುಂದಿರುವ ಪ್ರಶ್ನೆ.
 
ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲ್ಲಿಗೆ ಭೇಟಿ ಕೊಡಿ
 
LIVE Karnataka Lok Sabha 2014 Election Results
http://elections.webdunia.com/karnataka-loksabha-election-results-2014.htm
 
LIVE Lok Sabha 2014 Election Results
http://elections.webdunia.com/Live-Lok-Sabha-Election-Results-2014-map.htm

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೂಡಲಸಂಗಮದಲ್ಲಿ ನಾನ್ ವೆಜ್ ಸೇವಿಸಿದ ಅನ್ಯಕೋಮಿನವರು: ವಿಡಿಯೋ ಹಂಚಿ ಬಿಜೆಪಿ ಆಕ್ರೋಶ Video

ಮೇಲ್ಮನೆ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ವಿಜಯೇಂದ್ರ ವಿಶ್ವಾಸ

ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆ: ಸಂಜೆ ಮನೆಗೆ ತೆರಳುವ ಮುನ್ನ ಎಚ್ಚರ

ಅಬ್ಬಾ ಎಂಥಾ ಭಯಾನಕ ದೃಶ್ಯ…ಪೊಲೀಸ್ ಠಾಣೆಯಲ್ಲೇ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಎದೆ ಝಲ್ಲೆನಿಸುತ್ತದೆ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Show comments