Webdunia - Bharat's app for daily news and videos

Install App

ಗೂಗಲ್‌ ಸಿ.ಇ.ಒ. ಪಿಚೈ ಮತ್ತು ಅಡೋಬೆಯ ನಾರಾಯಣ್ ಭೇಟಿಯಾಗಲಿರುವ ಮೋದಿ

Webdunia
ಬುಧವಾರ, 2 ಸೆಪ್ಟಂಬರ್ 2015 (17:43 IST)
ಈ ತಿಂಗಳ 27ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್​‌ಗೆ ತೆರಳುತ್ತಿರುವ ಪ್ರಧಾನಿ ಮೋದಿ ಆ ಸಂದರ್ಭದಲ್ಲಿ ಮೋದಿ, ವ್ಯಾಲಿಯ ಅಗ್ರಗಣ್ಯ ಸಿ.ಇ.ಒ ಗಳ ಜತೆ ಮಾತುಕತೆ ನಡೆಸಲಿದ್ದಾರೆ. ಅದರಲ್ಲಿ ಹೆಚ್ಚಿನವರು ಭಾರತೀಯ ಮೂಲದವರೇ ಆಗಿದ್ದು ಗೂಗಲ್‌ನ ಸುಂದರ್ ಪಿಚೈ,  ಅಡೋಬ್ ಗಣಕದ ಶಂತನು ನಾರಾಯಣ್, ಮತ್ತು ಸ್ಯಾನ್ಡಿಸ್ಕ್‌ನ ಸಂಜಯ್ ಮಲ್ಹೋತ್ರಾ ಅವರು ಸಹ ಆ ಪಟ್ಟಿಯಲ್ಲಿದ್ದಾರೆ.
 
ಎಸ್​ಎಪಿ ಸೆಂಟರ್​ನಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮೋದಿ ಮಾತನಾಡಲಿರುವ ಪ್ರಧಾನಿ ಮೋದಿ ಬಳಿಕ ಸಿ.ಇ.ಒ ಗಳ ಜತೆ ಜತೆ ಚರ್ಚಿಸಲಿದ್ದಾರೆ. 
 
ಎಸ್‌ಎಪಿ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಆನ್​ಲೈನ್ ನೋಂದಣಿ ಪ್ರಕ್ರಿಯೆ ಕಳೆದ ಹಲವು ದಿನಗಳ ಹಿಂದೆಯೇ ಆರಂಭವಾಗಿದ್ದು. ಮೊದಲ ದಿನವೇ ಸುಮಾರು 10,000 ಜನ ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆ ಆಯೋಜಿಸಿರುವ ಸುಸ್ಥಿರ ಅಭಿವೃದ್ಧಿ ಶೃಂಗದಲ್ಲಿ ಪಾಲ್ಗೊಳ್ಳಲಿರುವ ಮೋದಿ ಬಳಿಕ ಅಲ್ಲಿಂದ ಕ್ಯಾಲಿಫೋರ್ನಿಯಾಕ್ಕೆ ತೆರಳಲಿದ್ದಾರೆ. 
 
ಎಸ್‌ಎಪಿಯಲ್ಲಿ  17,496 ಜನರಿಗೆ ಸ್ಥಳಾವಕಾಶವಿದೆ. ಆದರೆ ಮೋದಿಯವರ ಕಾರ್ಯಕ್ರಮಕ್ಕೆ ಭಾಗವಹಿಸಲು ಉತ್ಸುಕರಾಗಿರುವ ಜನರ ಟಿಕೆಟ್ ಡಿಮ್ಯಾಂಡ್ ಈ ಸಂಖ್ಯೆಯನ್ನು ಮೀರಿ ಹೋಗಿದೆ. 
 
ಮೈದಾನದ ಹೊರಗಡೆ ದೊಡ್ಡ ಪರದೆಯನ್ನು ಅಳಡಿಸುವುದರ ಮೂಲಕ ಟಿಕೆಟ್ ಸಿಗದಿದ್ದವರಿಗೆ ಮೋದಿಯವರ ಮಾತುಗಳನ್ನು ಕೇಳುವುದಕ್ಕೆ ಅನುವು ಮಾಡಿಕೊಡಲು ಕಾರ್ಯಕ್ರಮ ಸಂಘಟನಾಕಾರರು ಆಲೋಚಿಸುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments