Select Your Language

Notifications

webdunia
webdunia
webdunia
webdunia

ಶಾಲಾ ಪಠ್ಯದಲ್ಲಿ ಮೋದಿ ಪಾಠ : ರಾಜಸ್ಥಾನ ಸರಕಾರ

ಶಾಲಾ ಪಠ್ಯದಲ್ಲಿ ಮೋದಿ ಪಾಠ : ರಾಜಸ್ಥಾನ ಸರಕಾರ
ಜೈಪುರ್ , ಶುಕ್ರವಾರ, 2 ಮೇ 2014 (19:37 IST)
ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಮೋದಿ ಪ್ರಧಾನಿಯಾದರೆ ಶಾಲಾ ಪಠ್ಯದಲ್ಲಿ ಅವರ ಕುರಿತು ಪಾಠವನ್ನು ಸೇರಿಸಲು ರಾಜಸ್ಥಾನ್ ಸರ್ಕಾರ ಯೋಜನೆ ರೂಪಿಸುತ್ತಿದೆ.
 
"ಭಾರತದ ಪ್ರಧಾನಮಂತ್ರಿಗಳ ಹೆಸರಿನಲ್ಲಿ ಕೇವಲ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಕುರಿತಷ್ಟೇ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಆದರೆ ನಾವು ಪಠ್ಯಪುಸ್ತಕದಿಂದ ದೂರ ಇಡಲ್ಪಟ್ಟಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಇತರ ಪ್ರಧಾನಿಗಳ ಕುರಿತು ಮಕ್ಕಳಿಗೆ ತಿಳಿಸ ಬಯಸುತ್ತೇವೆ" ಎಂದು ರಾಜಸ್ಥಾನದ ಶಿಕ್ಷಣ ಮಂತ್ರಿ ಕಾಲೀಚರಣ್ ಸರಾಫ್ ಹೇಳಿದ್ದಾರೆ. 
 
"ಒಂದು ವೇಳೆ ಮೋದಿ ಪ್ರಧಾನಿಯಾದರೆ ನಾವು ಅವರ ಕುರಿತು ಸಹ ಪಠ್ಯವನ್ನು ಸೇರಿಸಲಿದ್ದೇವೆ. ಅವರ ಬದುಕು ಮತ್ತು ಹೋರಾಟ ಹಲವಾರು ಮಕ್ಕಳಿಗೆ ಸ್ಪೂರ್ತಿಯಾಗ ಬಹುದು" ಎಂದು ಸರಾಫ್ ಹೇಳಿದ್ದಾರೆ. 
 
ಅವರು ಪ್ರಧಾನಿಯಾಗದಿದ್ದರೆ ಎಂಬ ವರದಿಗಾರರ ಪ್ರಶ್ನೆಗೆ ಪ್ರಶ್ನೆಗೆ ಉತ್ತರಿಸಿದ ಅವರು "ಭಾರತ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ ಮತ್ತು ಹೊಂದಿದೆ ಮತ್ತು ನಿಸ್ಸಂಶಯವಾಗಿ ಪ್ರತಿಯೊಬ್ಬರ ಬಗ್ಗೆ ಬರೆಯಲು ಸಾಧ್ಯವಿಲ್ಲ" ಎಂದು  ಅಭಿಪ್ರಾಯ ಪಟ್ಟರು.

Share this Story:

Follow Webdunia kannada