Webdunia - Bharat's app for daily news and videos

Install App

ಮತ್ತೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಮೋದಿ ಪತ್ನಿ

Webdunia
ಸೋಮವಾರ, 4 ಮೇ 2015 (15:49 IST)
ತಮಗೆ ನೀಡಿರುವ ಭದ್ರತೆಯ ವಿವರಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ಮತ್ತೆ  ಮಾಹಿತಿ ಹಕ್ಕು ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ತಮಗೆ ನೀಡಲಾಗಿರುವ ಭದ್ರತೆಯ ವಿವರಗಳನ್ನು ನೀಡುವಂತೆ ಜಶೋದಾಬೆನ್ 2014ರ ನವೆಂಬರ್‌ನಲ್ಲಿ  ಮೆಹ್ಸಾನಾ ಪೊಲೀಸರ ಬಳಿ ಮಾಹಿತಿ ಹಕ್ಕು ಕಾಯ್ದೆಯಡಿ  ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಕೇಳಿದ್ದ ಮಾಹಿತಿಯನ್ನು ನೀಡಲು ನಿರಾಕರಿಸಿದ್ದ ಪೊಲೀಸರು ನೀವು ಕೇಳಿರುವ ವಿವರ ಸ್ಥಳೀಯ ಗುಪ್ತಚರ ಬ್ಯೂರೋಗೆ ಸಂಬಂಧಿಸಿದೆ ಹಾಗೂ ಭದ್ರತಾ ವಿಷಯವಾಗಿದೆ. ಆದ್ದರಿಂದ ಮಾಹಿತಿ ನೀಡಲು ಕಾಯ್ದೆಯಡಿ ಸಾಧ್ಯವಿಲ್ಲ ಎಂದು ಹೇಳಿದ್ದರು.
 
ಆದರೆ ಈ ಮಾಹಿತಿಯನ್ನು ಪಡೆಯಬಯಸಿರುವ ಮೋದಿಯವರ ಪತ್ನಿ ಜಶೋದಾ ಬೆನ್ ಶನಿವಾರ ಮತ್ತೊಮ್ಮೆ ಗಾಂಧಿನಗರದ ಮಾಹಿತಿ ಹಕ್ಕು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
 
ತಮ್ಮ ವಕೀಲ ಸಂದೀಪ್ ಮೋದಿಯವರ ಜೊತೆ ಗಾಂಧಿ ನಗರಕ್ಕೆ ಆಗಮಿಸಿದ ಜಶೋದಾ ಬೆನ್, ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments