Webdunia - Bharat's app for daily news and videos

Install App

ರಾಮದೇವ್ ಆಶ್ರಮದಲ್ಲಿ ಮೋದಿ ಪತ್ನಿ ಜಶೋಧಾ !

Webdunia
ಶುಕ್ರವಾರ, 25 ಏಪ್ರಿಲ್ 2014 (08:47 IST)
ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೋದಿ ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ ನಂತರ  ಅವರ ಪತ್ನಿ ಜಶೋಧಾ ಬೆನ್‌ರವರನ್ನು ರಾಮದೇವ್ ಬಾಬಾರವರ ಆಶ್ರಮದಲ್ಲಿ ಇಡಲಾಗಿದೆ. ಆದರೆ ರಾಮದೇವ್ ಆಶ್ರಮದವರು ಈ ಸುದ್ದಿಯನ್ನು ಖಂಡಿಸಿದ್ದಾರೆ.
 
ತಮ್ಮ ಪತಿ ಮೋದಿ ಪ್ರಧಾನಿಯಾಗ ಬೇಕೆಂಬ ಸಂಕಲ್ಪದಲ್ಲಿ ತೀರ್ಥಯಾತ್ರೆಗೆ ಹೊರಟ ಜಶೋಧಾ ಬೆನ್‌ರವರನ್ನು ಸಂಪರ್ಕಿಸಿದ ಮೋದಿ ಬೆಂಬಲಿಗರು ಅವರನ್ನು ಉತ್ತರಾಖಂಡ್‌ನ ರಾಮದೇವ್ ಆಶ್ರಮದಲ್ಲಿ ಅಡಗಿಸಿಡಲಾಗಿದೆ. ಯಾತ್ರಾರ್ಥಿಗಳ ವೇಷದಲ್ಲಿರುವ ಮೋದಿ ಸಮರ್ಥಕರು ಅವರಿಗೆ ಭದ್ರತೆಯನ್ನು ಒದಗಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಕಾಂಗ್ರೆಸ್ ಮತ್ತು ಮಾಧ್ಯಮಗಳಿಂದ ತಪ್ಪಿಸಲು ಅವರನ್ನು ಹೀಗೆ ಅಜ್ಞಾತ ಸ್ಥಳದಲ್ಲಿ ಇಡಲಾಗಿದೆ . ಒಂದು ವೇಳೆ ಜಶೋಧಾರವರನ್ನು ಮಾಧ್ಯಮಗಳು ಅಥವಾ ವಿರೋಧ ಪಕ್ಷಗಳು ಕಂಡುಕೊಂಡರೆ ಮೋದಿಯ ವರ್ಚಸ್ಸಿಗೆ ಕುಂದು ತರುವಂತಹದ್ದು ನಡೆಯಬಹುದು ಎಂಬ ಶಂಕೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು  ವರದಿಯಾಗಿದೆ.
 
ವಡೋದರಾದಲ್ಲಿ ಮೋದಿ ತಾವು ವಿವಾಹಿತರೆಂದು ಘೋಷಿಸಿದ ನಂತರ, ಆ ವಿಷಯವನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಅವರ ಮೇಲೆ ಟೀಕಾಸ್ತ್ರಗಳ ಸುರಿಮಳೆಯನ್ನು ಸುರಿಸುತ್ತಿವೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments