Select Your Language

Notifications

webdunia
webdunia
webdunia
webdunia

ಸರಕಾರಿ ನೌಕರರು ಆರೆಸ್ಸೆಸ್ ಸೇರ್ಪಡೆಗೆ ಗುಜರಾತ್ ಸರಕಾರ ಆದೇಶ

ಸರಕಾರಿ ನೌಕರರು ಆರೆಸ್ಸೆಸ್ ಸೇರ್ಪಡೆಗೆ ಗುಜರಾತ್ ಸರಕಾರ ಆದೇಶ
ವಡೋದರಾ , ಶುಕ್ರವಾರ, 27 ಫೆಬ್ರವರಿ 2015 (16:45 IST)
ಚತ್ತೀಸ್‌ಗಡ್‌ನ ಬಿಜೆಪಿ ಸರಕಾರ ಸರಕಾರಿ ಉದ್ಯೋಗಿಗಳಿಗೆ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿದ ಒಂದು ದಿನದ ನಂತರ ಇದೀಗ ಗುಜರಾತ್ ಸರಕಾರ ಕೂಡಾ ಸರಕಾರಿ ಉದ್ಯೋಗಿಗಳಿಗೆ ಆರೆಸ್ಸೆಸ್ ಸೇರುವಂತೆ ಆಹ್ವಾನ ನೀಡಿದೆ.
 
ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ ರಾಜಕೀಯ ಸಂಘಟನೆಯಾಗಿಲ್ಲವಾದ್ದರಿಂದ ಸರಕಾರಿ ಉದ್ಯೋಗಿಗಳು ಆರೆಸ್ಸೆಸ್ ಸೇರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಭಯ ಸರಕಾರಗಳು ವಾದ ಮಂಡಿಸುತ್ತಿವೆ. ಆದರೆ ಮೋದಿ ಮತ್ತು ಅಮಿತ್ ಶಾ ಹಾಗೂ ಎನ್‌ಡಿಎ ಸಚಿವರು ಮತ್ತು ಮುಖ್ಯಮಂತ್ರಿಗಳು ಆರೆಸ್ಸೆಸ್‌ಗೆ ಸೇರದವರಾಗಿದ್ದಾರೆ ಎನ್ನುವ ಬಗ್ಗೆ ಉತ್ತರಿಸಲು ನಿರಾಕರಿಸುತ್ತಿವೆ. 
 
ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರಿ ನೌಕರರಿಗೆ ಆರೆಸ್ಸೆಸ್ ಸೇರುವಂತೆ ಆಹ್ವಾನದ ಆದೇಶ ಬಂದಿರುವುದು ಸತ್ಯ ಸಂಗತಿ. ವಿಧಾನಸಭೆಯ ಅಧಿವೇಶನದ ನಂತರ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
 
ಕಳೆದ ಸೋಮವಾರದಂದು ಚತ್ತಿಸ್‌ಗಡ್‌ನ ರಮಣ್ ಸಿಂಗ್ ನೇತೃತ್ವದ ಸರಕಾರ, ಸರಕಾರಿ ನೌಕರರಿಗೆ ಆರೆಸ್ಸೆಸ್ ಸೇರಲು ಆಹ್ವಾನ ನೀಡಿದೆ. 1965ರ ಸಂವಿಧಾನದ ಕಾಯ್ದೆ ಅನ್ವಯ ಸರಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ. ಆದರೆ, ಆರೆಸ್ಸೆಸ್ ರಾಜಕೀಯ ಸಂಘಟನೆಯಲ್ಲ ಎಂದು ವಾದ ಮಂಡಿಸಿದ್ದಾರೆ. 
 

Share this Story:

Follow Webdunia kannada