Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶಕ್ಕೆ ವರ್ಗಾವಣೆಗೊಂಡ ರಾಹುಲ್-ಮೋದಿ ಕಾಳಗ

ಉತ್ತರ ಪ್ರದೇಶಕ್ಕೆ ವರ್ಗಾವಣೆಗೊಂಡ ರಾಹುಲ್-ಮೋದಿ ಕಾಳಗ
ಲಕ್ನೋ , ಸೋಮವಾರ, 19 ಡಿಸೆಂಬರ್ 2016 (16:50 IST)
ಇಲ್ಲಿಯವರೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಷ್ಪರ ಕೆಸರೆರೆಚಾಟ ನಡೆಸುತ್ತ ಕಂಡುಬರುತ್ತಿದ್ದ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜಟಾಪಟಿ ಈಗ ಇನ್ನು ಮೂರು ತಿಂಗಳಲ್ಲಿ ಚುನಾವಣೆಯನ್ನೆದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ರಂಗೇರಿದೆ.

 
ಉಭಯ ನಾಯಕರು ಇಂದು ರಾಜ್ಯದಲ್ಲಿ ಚುನಾವಣೆ ಪ್ರಚಾರವನ್ನು ನಡೆಸಿದ್ದು ಪರಷ್ಪರ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
 
ಕಾನ್ಪುರದಲ್ಲಿ ಮೋದಿ ಪರಿವರ್ತನಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರೆ, ಅದೇ ಸಮಯದಲ್ಲಿ ರಾಹುಲ್ ಗಾಂಧಿ, ಜಾನ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 
 
ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತ, ಕಪ್ಪುಹಣವನ್ನು ಬುಡಸಮೇತ ಕಿತ್ತೊಗೆಯುವುದು ನಮ್ಮ ಅಜೆಂಡಾ. ಆದರೆ ಕಾಂಗ್ರೆಸ್ ಅಜೆಂಡಾ ಸಂಸತ್ ಕಲಾಪಕ್ಕೆ ಅಡ್ಡಿ ಉಂಟುಮಾಡುವುದು. ಗದ್ದಲದಲ್ಲೇ ಸಂಸತ್ ಕಲಾಪವನ್ನು ವ್ಯರ್ಥ ಮಾಡಲಾಯಿತು ಎಂದು ಖೇದ ವ್ಯಕ್ತ ಪಡಿಸಿದರು.
 
ನಾವು ದೇಶದ ಅಭಿವೃದ್ಧಿ ಹಾದಿಯನ್ನು ಇಲ್ಲಿಂದಲೇ ಬದಲಿಸಬೇಕಿದೆ. ದೇಶದ ಅಭಿವೃದ್ಧಿಗೆ ಕಾಲ ಕೂಡಿ ಬಂದಿದ್ದು ಯುವಜನರ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಕಪ್ಪು ಹಣದ ವಿರುದ್ಧ ನಮ್ಮ ಹೋರಾಟ ಮುಂದುವರೆದಿದೆ. ನೋಟ್ ಬ್ಯಾನ್ ಬಳಿಕ ಬಂದ ಕಪ್ಪು ಹಣವನ್ನು ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಸದ್ಭಳಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
 
ಜಾನ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮೋದಿ ಮತ್ತು ನೋಟ್ ಬ್ಯಾನ್ ನಿರ್ಧಾರದ ವಿರುದ್ಧ ಕಿಡಿಕಾರಿದರು. 
 
ನೋಟು ನಿಷೇಧದ ನಿರ್ಧಾರರಿಂದ ಯಾವ ಪ್ರಯೋಜನವೂ ಆಗಿಲ್ಲ. ಎಲ್ಲ ಹಣ ಕಪ್ಪುಹಣವಲ್ಲ ಮತ್ತು ಎಲ್ಲ ಕಪ್ಪುಹಣ ಹಣದ ರೂಪದಲ್ಲಿಲ್ಲ. ಕೇಂದ್ರದ ಈ ನಡೆ ಕಪ್ಪು ಹಣದ ವಿರುದ್ಧದ ಹೋರಾಟವಲ್ಲ. ಬದಲಾಗಿ ಬಡವರು ಮತ್ತು ರೈತರ ವಿರುದ್ಧ. ಕಾಂಗ್ರೆಸ್ ಕೂಡ ಕಪ್ಪುಹಣದ ವಿರುದ್ಧವಿದೆ. ಮೋದಿ ಸರ್ಕಾರ ಬಡವರನ್ನು ನಿರ್ಲಕ್ಷ್ಯ ಮಾಡಿದೆ. ಅವರ ವಿರುದ್ಧ ಯುದ್ಧ ಸಾರಿದೆ. ರೈತರು ಸಂಕಷ್ಟದಲ್ಲಿದ್ದಾರೆ, ಆದರೆ ಮೋದಿ ಮೌನವಾಗಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
 
ಮೋದಿ ಭ್ರಷ್ಟಾಚಾರದ ವಿರುದ್ಧ ತಮಗೆ ಮಾಹಿತಿ ಇದೆ ಎಂದಿದ್ದ ರಾಹುಲ್ ಈ ಕುರಿತು ಇಂದು ಮೌನವಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್‌ನಲ್ಲಿ ಸಾಕಷ್ಟು ಬ್ಲ್ಯಾಕ್ ಮನಿ ಹೊಂದಿದವರಿರಬಹುದು: ಸದಾನಂದಗೌಡ