Select Your Language

Notifications

webdunia
webdunia
webdunia
webdunia

ಮೋದಿಯಿಂದ ಕಪ್ಪುಹಣದ ವಿರುದ್ಧ ಸಮರವಲ್ಲ, ಬಡವರ ವಿರುದ್ಧ ಸಮರ: ಮಮತಾ ಬ್ಯಾನರ್ಜಿ

ಮೋದಿಯಿಂದ ಕಪ್ಪುಹಣದ ವಿರುದ್ಧ ಸಮರವಲ್ಲ, ಬಡವರ ವಿರುದ್ಧ ಸಮರ: ಮಮತಾ ಬ್ಯಾನರ್ಜಿ
ನವದೆಹಲಿ , ಗುರುವಾರ, 17 ನವೆಂಬರ್ 2016 (14:39 IST)
ಪ್ಲ್ಯಾಸ್ಟಿಕ್ ಮನಿ ಹೆಸರಲ್ಲಿ ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಮೊದಲು ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತನ್ನಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ದೆಹಲಿಯ ಅಜಾದ್ ಮಂಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡ ಮಮತಾ, ಪ್ರಧಾನಿ ಮೋದಿ ದೇಶದ ಜನತೆಯನ್ನು ಭಿಕ್ಷುಕರನ್ನಾಗಿಸಿದ್ದಾರೆ ಎಂದು ಕಿಡಿಕಾರಿದರು.
 
ಪ್ರತಿದಿನ ವಜ್ರ, ಬಂಗಾರ, ಎಟಿಎಂ ತಿನ್ನೋಕಾಗುತ್ತಾ?ಪ್ರತಿ ದಿನ ನೀತಿ ಬದಲಾಗುತ್ತಿರುವುದರಿಂದ ದೇಶದ ಜನತೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೊಂದಿರುವ ಭ್ರಷ್ಟರು ನೆಮ್ಮದಿಯಾಗಿದ್ದಾರೆ. ಆದರೆ. ಬಡವರು ಸಣ್ಣ ವ್ಯಾಪಾರಿಗಳು, ಉದ್ಯೋಗಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತರಲಾಗದ ಕೇಂದ್ರ ಸರಕಾರ ತನ್ನದೇ ದೇಶದ ಜನತೆಯ ವಿರುದ್ಧ ಸಮರ ಸಾರಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಪ್ರಿಯತಮನಿಗೆ 20 ಬಾರಿ ಇರಿದು ಕೊಂದ