Webdunia - Bharat's app for daily news and videos

Install App

ವೈಷಮ್ಯ ಮರೆತು ವೇದಿಕೆ ಹಂಚಿಕೊಂಡ ಮೋದಿ-ನಿತೀಶ್

Webdunia
ಶನಿವಾರ, 25 ಜುಲೈ 2015 (11:02 IST)
ರಾಜಕೀಯ ರಂಗದಲ್ಲಿ ವೈಷಮ್ಯ ಸಾಧಿಸುತ್ತಾ ಹಾವು-ಮುಂಗುಸಿಗಳಂತೆ ವರ್ತಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 
 
ಹೌದು, ಕೆಲ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಇಂದು ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು. ಈ ವೇಲೆ ಸಿಎಂ ನಿತೀಶ್ ಕುಮಾರ್ ಕೂಡ ಆಗಮಿಸಿ ವೇದಿಕೆ ಹಂಚಿಕೊಂಡಿದ್ದಾರೆ. ಅಲ್ಲದೆ ಅಭಿವೃದ್ಧಿಗಾಗಿ ಜೊತೆಯಲ್ಲಿಯೇ ವೇದಿಕೆ ಹಂಚಿಕೊಂಡಿದ್ದಾರೆ. 
 
ಇದೇ ವೇಳೆ ಮಾತನಾಡಿದ ನಿತೀಶ್ ಕುಮಾರ್, ಅಭಿವೃದ್ಧಿ ಸಾಧಿಸುವ ವೇಳೆ ಯಾವುದೇ ರೀತಿಯ ವೈಷಮ್ಯಗಳನ್ನು ಇಟ್ಟುಕೊಳ್ಳಬಾರದು. ಪಕ್ಷಬೇಧ ಮರೆತು ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಿದ್ದೇವೆ ಎಂದರು.  
 
ರಾಜಕೀಯ ತಜ್ಞರ ಪ್ರಕಾರ, ಬಿಹಾರ ವಿಧಾನಸಭಾ ಚುನಾವಣೆಯು ಹತ್ತಿರ ಸುಳಿಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಈ ಪ್ರಯತ್ನಗಳನ್ನು ನಡೆಸುತ್ತಿದ್ದು, ಪಕ್ಷದ ಬಲವರ್ಧನೆಗೆ ಈ ರೀತಿಯ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ. 
 
ಇನ್ನು ನರೇಂದ್ರ ಮೋದಿ ಹಾಗೂ ಸಿಎಂ ನಿತೀಶ್ ಕಳೆದ 2009ರಲ್ಲಿ ಅಂದರೆ ಮೋದಿ ಅವರು ಪ್ರಧಾನಿಯಾಗುವ ಮುನ್ನ ಭೇಟಿ ಯಾಗಿದ್ದರು.  ಆ ಬಳಿಕ ಇಂದೇ ಮೊದಲ ಬಾರಿಗೆ ಭೇಟಿಯಾಗಿದ್ದು, ವೇದಿಕೆ ಹಂಚಿಕೊಂಡಿದ್ದಾರೆ. 
 
ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಈ ರಾಜ್ಯ ಪ್ರವಾಸದಲ್ಲಿ ಐಐಟಿ ಕ್ಯಾಂಪಸ್, ದೀನ ದಯಾಳ್ ಗ್ರಾಮ ವಿದ್ಯುತ್ ಜ್ಯೋತಿ ಯೋಜನೆ, ಜಗದೀಶ್‌ಪುರ-ಹಾಲ್ಡಿಯಾ ಮಾರ್ಗದ ಗ್ಯಾಸ್ ಪೈಪ್ ಲೈನ್‌  ಹಾಗೂ ನೀತನ ರೈಲು ಮಾರ್ಗಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನು ಕೇಂದ್ರವು ವಿದ್ಯುತ್ ಯೋಜನೆಗೆ 76 ಸಾವಿರ ಕೋಟಿ ಹಾಗೂ ಗ್ಯಾಸ್ ಪೈಪ್ ಲೈನ್‌ ಯೋಜನೆಗೆ 10 ಸಾವಿರ ಕೋಟಿ ವ್ಯಯಿಸುತ್ತಿದೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments