Webdunia - Bharat's app for daily news and videos

Install App

ದ್ರವ ಆಹಾರದಲ್ಲೇ 45ಗಂಟೆ ಧ್ಯಾನ ಮಾಡಿದ ಮೋದಿ

sampriya
ಶನಿವಾರ, 1 ಜೂನ್ 2024 (15:14 IST)
Photo By X
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ  45 ಗಂಟೆಗಳ ಸುದೀರ್ಘ ಧ್ಯಾನದಲ್ಲಿ ನಿರತರಾಗಿದ್ದಾರೆ. ಗುರುವಾರ ಸಂಜೆ 6:45 ರ ಸುಮಾರಿಗೆ ಧ್ಯಾನ ಆರಂಭಿಸಿದ ಅವರು ಇಂದು ಸಂಜೆಗೆ ವೇಳೆಗೆ ಅಂತ್ಯ ಮಾಡಲಿದ್ದಾರೆ.

ಇನ್ನೂ ಸುದೀರ್ಘವಾಗಿ ಧ್ಯಾನದಲ್ಲಿ ತೊಡಗಿಸಿಕೊಂಡಿರುವ ಮೋದಿ ಅವರು ದ್ರವ ಆಹಾರವನ್ನಷ್ಟೇ ಸೇವನೆ ಮಾಡಿದ್ದಾರೆ. ಎಳೆನೀರು,  ದ್ರಾಕ್ಷಿ ರಸ ಮತ್ತು ಇತರ ದ್ರವಗಳನ್ನು ಸೇವಿಸಿದ್ದಾರೆ. ಅದಲ್ಲದೆ ಮೌನವಾಗಿ ಧ್ಯಾನದಲ್ಲಿರುವ ಮೋದಿ,  ಧ್ಯಾನ ಮಂದಿರದಿಂದ ಹೊರಬಂದಿಲ್ಲ.

2024 ರ ಲೋಕಸಭಾ ಚುನಾವಣೆಯ ಪ್ರಚಾರದ ಅಂತ್ಯದೊಂದಿಗೆ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್‌ ಸ್ಮಾರಕದಲ್ಲಿ ಧ್ಯಾನಕ್ಕೆ ಜಾರಿದ್ದಾರೆ. ಕುತೂಹಲಕಾರಿ ವಿಷಯ ಏನೆಂದರೆ 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳ ಇದಾಗಿದೆ.

ಇನ್ನೂ ಮೋದಿ  ಭೇಟಿ ಹಿನ್ನೆಲೆ ಧ್ಯಾನ ಮಂದಿರದ ಸುತ್ತಾಮತ್ತಾ 2000ಸಾವಿರ ಪೊಲೀಸ್‌ ಸಿಬ್ಬಂದಿಯೊಂದಿಗೆ ಭದ್ರತೆ ಹೆಚ್ಚಿಸಲಾಗಿದೆ.  ಅದಲ್ಲದೆ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆ ಬಿಗಿಯಾದ ಕಟ್ಟೆಚ್ಚರವನ್ನು ಕಾಯ್ದುಕೊಂಡಿದೆ.

ವಿವೇಕಾನಂದ ರಾಕ್ ಸ್ಮಾರಕಕ್ಕೆ ತೆರಳುವ ಮುನ್ನ ಪ್ರಧಾನಿ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜೂನ್ 1 ರಂದು ನಿರ್ಗಮಿಸುವ ಮೊದಲು, ಮೋದಿ ಅವರು ಸ್ಮಾರಕದ ಪಕ್ಕದಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡುವ ಸಾಧ್ಯತೆಯಿದೆ.
????????<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments