Webdunia - Bharat's app for daily news and videos

Install App

ಮೋದಿ ಮನ್ ಕಿ ಬಾತ್ : ಕೋಟ್ಯಂತರ ಜನರಿಗೆ ಉದ್ಯೋಗ ಒದಗಿಸುವ ಶಕ್ತಿ ಖಾದಿಗಿದೆ

Webdunia
ಭಾನುವಾರ, 31 ಜನವರಿ 2016 (12:50 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ 16ನೇ ಆವೃತ್ತಿಯ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಮನದಾಳದ ಅನಿಸಿಕೆಗಳನ್ನು ಬಿಚ್ಚಿಟ್ಟಿರು. ಅದರ ಮುಖ್ಯಾಂಶಗಳು ಕೆಳಗಿವೆ.
 
ನಾವು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಜನವರಿ 30ರಂದು 2 ನಿಮಿಷಗಳ ಮೌನಾಚರಣೆ ಮಾಡಿದೆವು. ಇಡೀ ರಾಷ್ಟ್ರವು ಜನವರಿ 30ರಂದು 11ಗಂಟೆಗೆ ಪ್ರತಿವರ್ಷ ಮೌನಾಚರಣೆ ಮಾಡಿದರೆ, ಆ ಕ್ಷಣದಲ್ಲಿ ಹೊಮ್ಮುವ ಶಕ್ತಿಯನ್ನು ಊಹಿಸಬಹುದು. 
 
 ಭಾರತದ ಸ್ವಾತಂತ್ರ್ಯವು ಖಾದಿಯಲ್ಲಿ ಅಡಗಿದೆ ಎಂದು ಸರ್ದಾರ್ ಪಟೇಲ್ ಹೇಳಿದ್ದರು. ಖಾದಿ ಈಗ ಚಿಹ್ನೆಯಾಗಿದ್ದು, ಯುವಕರಿಗೆ ಕೂಡ ಆಕರ್ಷಣೆಯ ಕೇಂದ್ರವಾಗಿದೆ ಮತ್ತು ಯುವ ಜನತೆಯ ಗುರುತಿನಂತಿದೆ.  ಕೋಟ್ಯಂತರ ಜನರಿಗೆ ಉದ್ಯೋಗವನ್ನು ಒದಗಿಸುವ ಶಕ್ತಿ ಖಾದಿಗಿದೆ. ಖಾದಿ ಉತ್ಪಾದನೆಗೆ ಉತ್ತೇಜನ ನೀಡಲು ಕೆಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಇಲಾಖೆಗಳಿಂದ ಖಾದಿಯ ಬೇಡಿಕೆಯನ್ನು ಈಡೇರಿಸಲು 18 ಲಕ್ಷ ಜನರಿಗೆ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತದೆ. ಜನವರಿ 30ರಂದು ಬಾಪುವಿನ ಹುತಾತ್ಮ ದಿನದಂದು ತಮ್ಮ ವಾರ್ಡ್‌ರೋಬ್‌ನಲ್ಲಿ ಕನಿಷ್ಠ ಒಂದು ಜೊತೆ ಖಾದಿ ವಸ್ತ್ರವನ್ನು ಇಡುವಂತೆ ತಾವು ಜನರಿಗೆ ಒತ್ತಾಯಿಸುವುದಾಗಿ ಮೋದಿ ಹೇಳಿದರು. 
 
 ಅನೇಕ ಜನರು ಸೌರ ಚರಕದಿಂದ ತಮ್ಮ ಜೀವನಲ್ಲಾದ ಮುಖ್ಯ ಬದಲಾವಣೆಗಳ ಬಗ್ಗೆ ತಮಗೆ ಬರೆದಿದ್ದಾರೆ ಎಂದು ಮೋದಿ ಹೇಳಿದರು. ಹರ್ಯಾಣ ಮತ್ತು ಗುಜರಾತ್ ಸರ್ಕಾರ ಹೆಣ್ಣು ಮಕ್ಕಳಿಗೆ ಪ್ರಾಧಾನ್ಯತೆ ನೀಡುವ ಮೂಲಕ ಬೇಟಿ ಬಚಾವೋ, ಬೇಟಿ ಪಡಾವೋಗೆ ಅತ್ಯುತ್ತಮ ಉದಾಹರಣೆಯಾಗಿವೆ ಎಂದು ಮೋದಿ ವಿಶ್ಲೇಷಿಸಿದರು.
 ಸಂಕಷ್ಟದ ರೈತರಿಗೆ ಭದ್ರತೆ ಒದಗಿಸಲು ನಾವು ಯೋಚಿಸಬಹುದಾದ ಏಕೈಕ ಮಾರ್ಗ ಬೆಳೆ ವಿಮೆ ಯೋಜನೆ. ಬೆಳೆ ವಿಮೆ ಯೋಜನೆಗೆ ಸಾಧ್ಯವಾದಷ್ಟು ರೈತರನ್ನು ನಾವು ಸಂಘಟಿಸೋಣ ಎಂದು ಮೋದಿ ಹೇಳಿದರು. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ