Webdunia - Bharat's app for daily news and videos

Install App

ನಾಗ್ಪುರ್‌‌‌ದಲ್ಲಿ ಮೋದಿ ವಿರುದ್ಧ ಕಪ್ಪು ಧ್ವಜ ಪ್ರದರ್ಶನ

Webdunia
ಶುಕ್ರವಾರ, 22 ಆಗಸ್ಟ್ 2014 (18:29 IST)
ನಾಗ್ಪುರಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಯೋಜನೆಗೆ ಶಿಲಾನ್ಯಾಸ‌ ನೆರವೇರಿಸುತ್ತಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕೆಲ ಜನರು ಕಪ್ಪು ಧ್ವಜ ತೋರಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
 
ಇದಕ್ಕು ಮೊದಲು ಮಾತನಾಡಿದ ನರೇಂದ್ರ ಮೋದಿ, ಅಭಿವೃದ್ದಿಗೆ ವಿದ್ಯುತ್ ಅವಶ್ಯಕವಾಗಿದೆ. ಸರಕಾರ ಗ್ರಾಮ-ಗ್ರಾಮಗಳಲ್ಲಿ 24 ಗಂಟೆ ವಿಧ್ಯುತ್‌‌ ಸೌಲಭ್ಯ ನೀಡುವ ಸಂಕಲ್ಪ ತೊಟ್ಟಿದೆ. ಮತ್ತು ಈ ಯೋಜನೆಯನ್ನು ಪೂರ್ಣಗೊಳಿಸಲು ಮನಸ್ಸಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ವಿದ್ಯುತ್‌ ಸರಿಯಾಗಿ ದೊರೆಯದ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. 
 
ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಸರಕಾರದ ಜನ-ಧನ ಯೋಜನೆಯಿಂದ ಲಾಭ ದೊರೆಯಲಿದೆ. ವಿದ್ಯುತ್‌‌ನಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆತಲ್ಲಿ ರೈತರ ಆತ್ಮಹತ್ಯೆಗೆ ಶರಣಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.
 
ನಾವು ಎಲ್ಲಾ ತರಹದ ಸಂಪನ್ಮೂಲಗಳು ಬಳಸಿಕೊಂಡು ವಿದ್ಯುತ್‌‌ ಉತ್ಪಾದನೆಯ ಪ್ರಯತ್ನ ಮಾಡುವೆವು. ಒಂದು ವೇಳೆ ಕಸದಿಂದ ಕೂಡ ವಿದ್ಯುತ್‌ ಉತ್ಪಾದನೆಯಾದರೆ, ಅದರಿಂದಲೂ ಕೂಡ ವಿದ್ಯುತ್‌ ಉತ್ಪಾದಿಸುತ್ತೇವೆ. ವಿಧ್ಯುತ್‌ನಿಂದ ಕೇವಲ ಕತ್ತಲೆ ದೂರಾಗುವುದಿಲ್ಲ, ಹೊರತು ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತವೆ ಎಂದು ಹೇಳಿದ ಮೋದಿ, ಜನರಿಗೆ ವಿದ್ಯುತ್‌ ಉಳಿತಾಯ ಮಾಡಿ ಎನ್ನುವ ಸಂದೇಶ ಕೂಡ ನೀಡಿದರು. 
 
ನಾಗ್ಪುರದಲ್ಲಿ ಕೆಲವು ಯೋಜನೆಗಳ ಆನ್‌‌ಲೈನ್‌ ಶಿಲಾನ್ಯಾಸ ಮತ್ತು ಉಧ್ಘಾಟನೆ ಮಾಡಿದ ನಂತರ ಜನರನ್ನುದ್ದೇಶಿಸಿ ಮಾತನಾಡಿ, ಜಾರ್ಖಂಡ್‌‌‌‌ ರಾಜ್ಯದಲ್ಲಿ ಅಭಿವೃದ್ಧಿಗೆ ಅವಕಾಶಗಳಿವೆ  ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ದಿ ಮಾಡಬಹುದಾಗಿದೆ. ಜಾರ್ಖಂಡದ ಪ್ರಸಕ್ತ ಪರಿಸ್ಥಿತಿಗೆ ನಮ್ಮ ಸಹಮತವಿಲ್ಲ. ನಾವೆಲ್ಲರು ಒಟ್ಟಾಗಿ ಜಾರ್ಖಂಡವನ್ನು ಅಭಿವೃದ್ದಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments