Select Your Language

Notifications

webdunia
webdunia
webdunia
webdunia

ಮೋದಿಗೆ ಆರ್ಥಿಕ ದೂರದೃಷ್ಟಿಯ ಕೊರತೆಯಿದೆ: ರಾಜ್ ಬಬ್ಬರ್

ಮೋದಿಗೆ ಆರ್ಥಿಕ ದೂರದೃಷ್ಟಿಯ ಕೊರತೆಯಿದೆ: ರಾಜ್ ಬಬ್ಬರ್
ನವದೆಹಲಿ , ಮಂಗಳವಾರ, 26 ಮೇ 2015 (16:56 IST)
ನರೇಂದ್ರ ಮೋದಿ ಸರಕಾರದ ವರ್ಷಾಚರಣೆಯ ಸಂದರ್ಭದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಹಿರಿಯ ನಾಯಕ ರಾಜ್ ಬಬ್ಬರ್, ಪ್ರಚಾರ-ಪ್ರಿಯ ಪ್ರಧಾನಿ ಬಂಡವಾಳಗಾರರನ್ನು ಆಕರ್ಷಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.  

ಮಹಾರಾಜಾ ಮೋದಿಯವರಿಗೆ ( ಸರಕಾರ ರಾಜಾಡಳಿತದಂತೆ ಆಗಿದೆ ಎಂದು ವ್ಯಂಗ್ಯವಾಡುತ್ತ) ಹಣಕಾಸು ಮುನ್ನೋಟವಿಲ್ಲ. ಉತ್ತಮ ಆರ್ಥಿಕ ನೀತಿ ಮಾತ್ರ ಹೂಡಿಕೆದಾರರನ್ನು ಆಕರ್ಷಿಸುತ್ತದೆ  ಆತ್ಮ ಪ್ರಚಾರ, ಸನ್ನಿವೇಶ ನಿರ್ವಹಣೆ ಮತ್ತು ಜನಪ್ರಿಯ ಘೋಷಣೆಗಳಲ್ಲ " ಎಂದು ನಟ ಪರಿವರ್ತಿತ ರಾಜಕಾರಣಿ ವ್ಯಂಗ್ಯವಾಡಿದ್ದಾರೆ.
 
'ಮೇಕ ಇನ್ ಇಂಡಿಯಾ' ಪ್ರಚಾರ ಕೇವಲ ಘೋಷಣೆಯಾಗಿ ಉಳಿದಿದೆ. ಉತ್ಪಾದನೆ ಹೆಚ್ಚಿಸಲು, ಕಚ್ಚಾ ವಸ್ತುಗಳ ಬೆಲೆ ನಿಯಂತ್ರಿಸಲು ಮತ್ತು ತೆರಿಗೆ ಸುಧಾರಣೆಗೆ ಸಂಬಂಧಿಸಿದಂತೆ ಸರಕಾರ ಯಾವ ನಡೆಯನ್ನು ಇಟ್ಟಿಲ್ಲ. 2014ರಲ್ಲಿ $ 26.89 ಬಿಲಿಯನ್ ಡಾಲರ್ ಇದ್ದ ಒಟ್ಟು ರಫ್ತು ಜನವರಿ 2015 ರಲ್ಲಿ $ 23.88 ಬಿಲಿಯನ್ ಡಾಲರ್‌ಗೆ ಕುಸಿತವಾಯಿತು. ವಾಸ್ತವವಾಗಿ  ಗೋಧಿ, ಅಕ್ಕಿ ಮತ್ತು ಜೋಳದ ರಫ್ತು ಸಹ ಕುಸಿದಿದೆ," ಎಂದು ಬಬ್ಬರ್ ತಿಳಿಸಿದ್ದಾರೆ.

Share this Story:

Follow Webdunia kannada