Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ- ಜಗನ್ಮೋಹನ್ ರೆಡ್ಡಿ ಭೇಟಿ: ಆಂಧ್ರಪ್ರದೇಶದಲ್ಲಿ ರಾಜಕೀಯ ಕೋಲಾಹಲ

ನರೇಂದ್ರ ಮೋದಿ- ಜಗನ್ಮೋಹನ್ ರೆಡ್ಡಿ ಭೇಟಿ: ಆಂಧ್ರಪ್ರದೇಶದಲ್ಲಿ ರಾಜಕೀಯ ಕೋಲಾಹಲ
ನವದೆಹಲಿ , ಮಂಗಳವಾರ, 31 ಮಾರ್ಚ್ 2015 (17:20 IST)
ಕಳೆದ ಒಂದುವರೆ ತಿಂಗಳಿನಿಂದ ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಹಾಗೂ ಅವರ ಸಂಸದರ ಭೇಟಿಗೆ ನಿರಾಕರಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೀಗ ಉಭಯ ನಾಯಕರು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಅಕ್ರಮ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಜಗನ್ ಅವರ ಆಸ್ತಿಯನ್ನು ಜಪ್ತಿ ಮಾಡಿದ ಕೆಲವೇ ದಿನಗಳ ನಂತರ ಜಗನ್ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಿಬಿಐ ಅಸ್ತ್ರದಿಂದ ತಪ್ಪಿಸಿಕೊಂಡು ಪ್ರಕರಣದಿಂದ ಮುಕ್ತಿಪಡೆಯಲು ಜಗನ್ಮೋಹನ್ ರೆಡ್ಡಿ ಕೇಂದ್ರ ಸರಕಾರದ ಬಾಗಿಲು ತಟ್ಟುತ್ತಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ನಾಯಕರು ಲೇವಡಿ ಮಾಡಿದ್ದಾರೆ.

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಟಿಡಿಪಿ ಪಕ್ಷದ ಕುರಿತಂತೆ ಅಸಮಾಧಾನಗೊಂಡಿದ್ದರಿಂದ ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಮಣೆಹಾಕುತ್ತಿದೆ ಎಂದು ವೈಎಸ್‌ಆರ್ ನಾಯಕರು ತಿರುಗೇಟು ನೀಡಿದ್ದಾರೆ.

ಕಳೆದ ತಿಂಗಳು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಅವಕಾಶ ಕೋರಿದ್ದ ಜಗನ್‌ಗೆ ಮೋದಿಯವರು ಭೇಟಿಯಾಗಲು ನಿರಾಕರಿಸಿದ್ದರು. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್‌ರನ್ನು ಭೇಟಿಯಾಗಿ ಜಗನ್ ತಂಡ ನಿರಾಸೆಯಿಂದ ಮರಳಿತ್ತು.

ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರ ಮಧ್ಯಸ್ಥಿಕೆ ವಹಿಸಿ ಪ್ರಧಾನಿಯವರು ಜಗನ್ ಅವರನ್ನು ಭೇಟಿ ಮಾಡಲು ಇಚ್ಚಿಸಿದ್ದಾರೆ ಎಂದು ವೈಎಸ್‌ಆರ್ ನಾಯಕ ಜಗನ್ಮೋಹನ್ ಮನವೊಲಿಸಿದ್ದರಿಂದ ಅವರು ಪ್ರದಾನಿ ಭೇಟಿಗೆ ತೆರಳಿದ್ದರು ಎಂದು ಪಕ್ಷದ ಮೂಲಗಳು ಬಹಿರಂಗಪಡಿಸಿವೆ.

Share this Story:

Follow Webdunia kannada