Select Your Language

Notifications

webdunia
webdunia
webdunia
webdunia

ಬಿಜೆಪಿ ಗೆಲ್ಲಿಸಿದಲ್ಲಿ ಆಸ್ಸಾಂ ರಾಜ್ಯವನ್ನು ದೇಶದ ನಂಬರ್ ಒನ್ ರಾಜ್ಯವಾಗಿಸುತ್ತೇವೆ: ಪ್ರಧಾನಿ ಮೋದಿ

ಬಿಜೆಪಿ ಗೆಲ್ಲಿಸಿದಲ್ಲಿ ಆಸ್ಸಾಂ ರಾಜ್ಯವನ್ನು ದೇಶದ ನಂಬರ್ ಒನ್ ರಾಜ್ಯವಾಗಿಸುತ್ತೇವೆ: ಪ್ರಧಾನಿ ಮೋದಿ
ಗುವಾಹಟಿ , ಬುಧವಾರ, 10 ಫೆಬ್ರವರಿ 2016 (15:20 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಪರ ಮತ ಚಲಾಯಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ  ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
 
ಕೇವಲ 20 ದಿನಗಳ ಅವಧಿಯಲ್ಲಿ ಎರಡನೇ ಬಾರಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಮೋದಿ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. 
 
ರಾಜಧಾನಿಯಿಂದ 400 ಕಿ.ಮೀ ದೂರದಲ್ಲಿರುವ ಮೊರಾನ್ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಗಾಂಧಿ ಕುಟುಂಬ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ನೀಡುವಲ್ಲಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. 
 
ರಾಜ್ಯದಲ್ಲಿ ಹಲವಾರು ಸರಕಾರಗಳು ಬಂದು ಹೋಗಿವೆ. ಆದರೆ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿವೆ. ಕೇಂದ್ರ ಸರಕಾರದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವಂತಹ ರಾಜ್ಯ ಸರಕಾರ ಅಧಿಕಾರಕ್ಕೆ ಬರಬೇಕಾಗಿದೆ. ಆದ್ದರಿಂದ, ಬಿಜೆಪಿ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತನ್ನಿ. ಆಸ್ಸಾ ರಾಜ್ಯವನ್ನು ದೇಶದಲ್ಲಿಯೇ ನಂಬರ್ ಒನ್ ರಾಜ್ಯವನ್ನಾಗಿಸುತ್ತೇವೆ ಎಂದು ಭರವಸೆ ನೀಡಿದರು. 
 
ಅಸ್ಸಾಂ ರಾಜ್ಯವನ್ನು ಚಹಾ ಉತ್ಪಾದಿಸುವ ತವರೂರಾಗಿದೆ. ನಾನು ಕೂಡಾ ಒಂದು ಕಾಲದಲ್ಲಿ ಚಹಾ ಮಾರಾಟ ಮಾಡುತ್ತಿದ್ದೆ. ಹಿಂದಿನ ಸರಕಾರಗಳು ಮನೆ, ಶಾಲೆ, ಕುಡಿಯುವ ನೀರಿನ ಸೌಲಭ್ಯ ಯಾವುದಾದರೂ ನೀಡಿದೆಯೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.

Share this Story:

Follow Webdunia kannada