Webdunia - Bharat's app for daily news and videos

Install App

ಭಯೋತ್ಪಾದನೆಯನ್ನು ಭಾರತಕ್ಕೆ ರಫ್ತು ಮಾಡಲಾಗುತ್ತಿದೆ: ಮೋದಿ ಆಕ್ರೋಶ

Webdunia
ಮಂಗಳವಾರ, 30 ಸೆಪ್ಟಂಬರ್ 2014 (15:46 IST)
ಭಯೋತ್ಪಾದನೆ ನಮ್ಮ ದೇಶದ ಉತ್ಪನ್ನವಲ್ಲ, ಅದನ್ನು ಭಾರತಕ್ಕೆ ರಫ್ತು ಮಾಡಲಾಗಿದೆ, ಭಾರತದ ಮುಸ್ಲಿಮರು ಅಲ್ ಖೈದಾವನ್ನು ಕೂಡ ವಿಫಲಗೊಳಿಸುತ್ತಾರೆ ಎಂದು ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 
ವಿದೇಶಿ ಸಂಬಂಧಗಳ ಪರಿಷತ್ತಿನ ಪ್ರಶ್ನೆಗೆ ಉತ್ತರಿಸುತ್ತಿದ್ದ ಮೋದಿ, ಭಾರತ ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಭಾರತದ ಮೂಲ ತತ್ವವಾದ ಗಾಂಧಿ ಮತ್ತು ಬುದ್ಧ ಬೋಧಿಸಿದ ಅಹಿಂಸೆ ಎಲ್ಲರನ್ನು ಸೆಳೆದುಕೊಳ್ಳುತ್ತದೆ ಎಂದರು. 
 
ನಾವು ಭಯೋತ್ಪಾದನೆಯಿಂದ ಆತಂಕಿತರಾಗಿದ್ದೇವೆ. ಇದು ನಮ್ಮ ದೇಶದಲ್ಲಿ ಹುಟ್ಟಿಕೊಂಡಿದ್ದಲ್ಲ.ಅದನ್ನು ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಭಾರತದ ಮುಸ್ಲಿಮರು ಭಯೋತ್ಪಾದನೆಯನ್ನು ವಿಫಲಗೊಳಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು  ಪ್ರತಿಪಾದಿಸಿದ್ದಾರೆ. 
 
ಭಯೋತ್ಪಾದನೆ ಮಾನವೀಯತೆಯ ಶತ್ರು. ಮಾನವೀಯತೆಯ ಉಳಿವಿಗೆ ಎದುರಾಗಿರುವ ಅಪಾಯದ ವಿರುದ್ಧ ಹೋರಾಡಲು ನಂಬಿಕೆ ಇಡುವ ಎಲ್ಲರೂ ಜತೆಗೂಡಬೇಕು ಎಂದು ಮೋದಿ ಹೇಳಿದ್ದಾರೆ. 
 
ಕಳೆದ 40 ವರ್ಷಗಳಿಂದ ನಾವು ಆತಂಕವಾದದ ಪರಿಣಾಮವನ್ನು ಅನುಭವಿಸುತ್ತಿದ್ದೇವೆ ಎಂದ ಮೋದಿ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ಸ್ ಮತ್ತು ಪತ್ರಕರ್ತರ ತಲೆ ಕಡಿದ ವಿಚಾರವನ್ನು ಕೂಡ ಪ್ರಸ್ತಾಪಿಸಿದರು. 
 
"ಕಳೆದ 40 ವರ್ಷಗಳಿಂದ ನಾವು ಭಯೋತ್ಪಾದನೆಯ ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ಇದು ಕಲ್ಪಿಸಲಾಗದ ವಿಕೃತಿ. ಪತ್ರಕರ್ತನ ಕುತ್ತಿಗೆಯನ್ನು ಸೀಳುವ ಭೀಕರ ದೃಶ್ಯವನ್ನು ನಾವು ದೂರದರ್ಶನದಲ್ಲಿ ನೋಡಿದೆವು. 21 ನೇ ಶತಮಾನದಲ್ಲಿ ಕೂಡ ನಮ್ಮ ಕಣ್ಮುಂದೆ ಇಂತಹ ಘೋರ ಅಪರಾಧವನ್ನು ಮಾಡಲಾಗುತ್ತಿದೆ. ಆದರೆ ಇಲ್ಲಿಯವರೆಗೂ ನಾವಿದರ ವಿರುದ್ಧ ಸವಾಲೆಸೆದಿಲ್ಲ. ನಾವು ಮಾನವೀಯತೆಯಲ್ಲಿ ನಂಬಿಕೆ ಇಡಬೇಕು. ನಾವು ಜತೆಯಾಗಿ ಸಾಗಬೇಕು. ಭಯೋತ್ಪಾದನೆ ಮಾನವೀಯತೆಯ ಶತ್ರು. ಮಾನವತ್ವದಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ಜತೆಗೂಡಿ ಆತಂಕವಾದದ ವಿರುದ್ಧ ಯುದ್ಧ ಸಾರಬೇಕು" ಎಂದು ಅವರು ಕರೆ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments