Select Your Language

Notifications

webdunia
webdunia
webdunia
webdunia

ಮೋದಿ ವರ್ಚಸ್ಸು ವೃದ್ಧಿಯಲ್ಲಿ ಸಾಮಾಜಿಕ ಮಾಧ್ಯಮದ ಪರಿಣಾಮಕಾರಿ ಬಳಕೆ

ಮೋದಿ ವರ್ಚಸ್ಸು ವೃದ್ಧಿಯಲ್ಲಿ ಸಾಮಾಜಿಕ ಮಾಧ್ಯಮದ ಪರಿಣಾಮಕಾರಿ ಬಳಕೆ
ವಾಷಿಂಗ್ಟನ್ , ಮಂಗಳವಾರ, 19 ಮೇ 2015 (15:48 IST)
ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮವನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಅವರು ಭಾರತದ ಯುವ ಜನಾಂಗದ ಆಶೋತ್ತರಗಳ ಜತೆ  ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ಮಿಷಿಗನ್ ಸ್ಕೂಲ್ ಆಫ್ ಇನ್​ಫಾರ್ಮೇಷನ್ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಜೊಯೋಜೀತ್ ಪಾಲ್ ಅಭಿಪ್ರಾಯ ಪಟ್ಟಿದ್ದಾರೆ. 

"ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿಯವರ ಸೋಶಿಯಲ್ ಅಕೌಂಟ್ಸ್‌ಗಳಲ್ಲಿ ಅವರ ರಾಜಕೀಯ ದೃಷ್ಟಿ ಬಿಂಬಿಸಲ್ಪಡುತ್ತಿತ್ತು.  ರಾಷ್ಟ್ರೀಯ ವಿದ್ಯಮಾನಗಳು ಮತ್ತು ಹಬ್ಬ-ಹರಿದಿನಗಳನ್ನು ಪ್ರಸ್ತಾಪಿಸಿದ್ದ ಅವರು ತಮಗಿಂತ ಹೆಚ್ಚಿನ ಮಹತ್ವ ಪಡೆದಿರುವ  ವಿಷಯಗಳನ್ನು ಬೆಂಬಲಿಸುವಂತೆ ಜನಪ್ರಿಯರೆನಿಸಿದ್ದ ವ್ಯಕ್ತಿಗಳಲ್ಲಿ ಕೋರಿಕೊಂಡಿದ್ದರು. ಹೊಸ ಹೊಸ ತಾಂತ್ರಿಕ ನವೀಕರಣಗಳನ್ನು ತ್ವರಿತವಾಗಿ ಮೋದಿ ಅಳವಡಿಸಿಕೊಳ್ಳುತ್ತಾರೆ", ಎಂದು ಪಾಲ್ ಹೇಳಿದ್ದಾರೆ.
 
"ಇದಕ್ಕೆ ಒಂದು ಉದಾಹರಣೆ ಎಂದರೆ ಟ್ವಿಟ್ಟರ್​ನಲ್ಲಿ ವಿಡಿಯೋ ವೈಶಿಷ್ಟ್ಯವನ್ನು ಬಳಸಿಕೊಳ್ಳುವ ತಂತ್ರಾಂಶ ಪರಿಚಯವಾದ ಕೂಡಲೇ, ಮೋದಿ ಅವರು ಅದನ್ನು ಬಳಸಿಕೊಂಡಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅವರ ಟ್ವೀಟ್​ಗಳ ಸ್ವರೂಪ ಬದಲಾಯಿತು. ಈಗ ಅತ್ಯಂತ ಕಡಿಮೆ ರಾಜಕೀಯ ಹೇಳಿಕೆಗಳನ್ನು ಪ್ರಕಟಿಸುವ ಅವರು ಹಾರೈಕೆ, ಸಂತಾಪ ಸೂಚಕ, ತಮ್ಮ ವಿಳಾಸದ ಅಪ್‌ಡೇಟ್‌ಗಳಂತಹ ಸಾಮಾನ್ಯ ಸಂದೇಶಗಳಿಗೆ ಒತ್ತು ನೀಡುತ್ತಾರೆ",ಎಂದು ಪಾಲ್ ಅಭಿಪ್ರಾಯಪಟ್ಟಿದ್ದಾರೆ.
 
"ಮೋದಿ ಜನಪ್ರಿಯತೆಯನ್ನು ಇತರ ರಾಜಕಾರಣಿಗಳ ಜತೆ ಹೋಲಿಸಿ ನೋಡಿದರೆ ಅವರ ಹತ್ತಿರ ಬಂದು ನಿಲ್ಲುವವರೆಂದರೆ ಮೂರು ದಶಲಕ್ಷ ಅನುಚರರನ್ನು ಹೊಂದಿರುವ ಶಶಿ ತರೂರ್. ಆದರೆ ಬಹುತೇಕ ತರೂರ್ ದೈನಂದಿನ ಚಟುವಟಿಕೆಗಳು ಮತ್ತು ವಿವಿಧ ವಿಷಯಗಳ ಕುರಿತು ಸ್ವ ಅಭಿಪ್ರಾಯಗಳನ್ನು ಹೊಂದಿರುವ ಮೂಲಕ ಶಶಿ ತರೂರ್ ಟ್ವೀಟ್​ಗಳು ಮೋದಿಯವರ ಟ್ವೀಟ್‌ಗಳೊಂದಿಗೆ ಸಾಮ್ಯತೆಯನ್ನು ಹೊಂದಿಲ್ಲ. ಇದು ಜನಪ್ರಿಯ ವ್ಯಕ್ತಿಗಳು ಸೇರಿದಂತೆ ಸಾಮಾನ್ಯವಾಗಿ ಇತರರ ಟ್ವೀಟ್​ಗಳಿಗಿಂತ ವಿಭಿನ್ನವಲ್ಲ"  ಎಂಬುದು ಪಾಲ್ ವಾದ.

Share this Story:

Follow Webdunia kannada