Select Your Language

Notifications

webdunia
webdunia
webdunia
webdunia

ನಿಯೋಜಿತ ಪ್ರಧಾನಿ ಮೋದಿ ಭಾವುಕರಾದ ಕ್ಷಣ ಕೆಳಗಿದೆ ಓದಿ

ನಿಯೋಜಿತ ಪ್ರಧಾನಿ ಮೋದಿ ಭಾವುಕರಾದ ಕ್ಷಣ ಕೆಳಗಿದೆ ಓದಿ
ನವದೆಹಲಿ , ಮಂಗಳವಾರ, 20 ಮೇ 2014 (16:23 IST)
ನವದೆಹಲಿ:  ನರೇಂದ್ರ ಮೋದಿ ಅವರ ಹೆಸರನ್ನು ಸಂಸದೀಯ ನಾಯಕರಾಗಿ ಹಿರಿಯ ಮುಖಂಡ ಅಡ್ವಾಣಿ ಸೂಚಿಸಿದ ಬಳಿಕ ಮೋದಿ ಹೆಸರನ್ನು ಇತರರು ಅನುಮೋದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಅಡ್ವಾಣಿ ಅವರ ಮಾತನ್ನು ನೆನೆಸಿಕೊಂಡು ಒಂದು ಕ್ಷಣ ಭಾವುಕರಾಗಿ ತಲೆ ತಗ್ಗಿಸಿದರು.

ನರೇಂದ್ರ ಮೋದಿ ಕೃಪೆಯಿಂದ ಈ ಅವಕಾಶ ನಮಗೆ ದೊರೆತಿದೆ ಎಂದು ಅಡ್ವಾಣಿ ತಮ್ಮ ಮಾತಿನಲ್ಲಿ ಹೇಳಿದ್ದನ್ನು ನೆನಪಿಸಿಕೊಂಡ ಮೋದಿ ಒಂದು ಕ್ಷಣ ಭಾವುಕರಾಗಿ ತಲೆ ಬಗ್ಗಿಸಿದರು. ನಂತರ  ಸ್ವಲ್ಪ ನೀರು ಕುಡಿದು, ' ಅಡ್ವಾಣಿ ಆ ಮಾತನ್ನು ಉಪಯೋಗಿಸಬಾರದು.

ಬಿಜೆಪಿ ನನ್ನ ತಾಯಿಯಿದ್ದಂತೆ, ತಾಯಿಯ ಸೇವೆಯನ್ನು ಮಾಡುವುದು ಕೃಪೆಯಲ್ಲ ಎಂದು ನುಡಿದರು.  ಮೋದಿಯ ಹೇಳಿಕೆಗೆ ಸಂಸದರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು. ಅಡ್ವಾಣಿ ಕೂಡ ಒಂದು ಕ್ಷಣ ಭಾವುಕರಾದರು. 

Share this Story:

Follow Webdunia kannada