Select Your Language

Notifications

webdunia
webdunia
webdunia
webdunia

ಮೋದಿ ಎಫೆಕ್ಟ್: ಭಾರತಕ್ಕೆ ಸೇರ್ಪಡೆಯಾಗಲು ಬಯಸುತ್ತಿರುವ ಪಾಕ್ ಆಕ್ರಮಿತ ಕಾಶ್ಮಿರದ ಜನತೆ

ಮೋದಿ ಎಫೆಕ್ಟ್: ಭಾರತಕ್ಕೆ ಸೇರ್ಪಡೆಯಾಗಲು ಬಯಸುತ್ತಿರುವ ಪಾಕ್ ಆಕ್ರಮಿತ ಕಾಶ್ಮಿರದ ಜನತೆ
ನವದೆಹಲಿ , ಬುಧವಾರ, 2 ಸೆಪ್ಟಂಬರ್ 2015 (17:07 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅಡಳಿತ ನಡೆಸುವ ವೈಖರಿಗೆ ಮನಸೋತಿರುವ ಪಾಕ್ ಆಕ್ರಮಿತ ಕಾಶ್ಮಿರದ ಜನತೆ, ಭಾರತದ ಭಾಗವಾಗಲು ಬಹಿರಂಗವಾಗಿ ಚರ್ಚಿಸಲು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಕಳೆದ 2014ರಲ್ಲಿ ಪ್ರವಾಹ ಪ್ರಕೋಪ ಮತ್ತು 2015ರ ಭೂಕಂಪದ ಸಂದರ್ಭದಲ್ಲಿ ಭಾರತ ಸರಕಾರ ತೋರಿದ ಔದಾರ್ಯತೆಯಿಂದ ಪಾಕ್ ಆಕ್ರಮಿತ ಕಾಶ್ಮಿರದ ಜನತೆ ಪ್ರಭಾವಿತರಾಗಿದ್ದಾರೆ ಎನ್ನಲಾಗಿದೆ.
 
ಇತ್ತೀಚೆಗೆ ಪಾಕಿಸ್ತಾನದ ಪ್ರವಾಸಕ್ಕೆ ತೆರಳಿದ್ದ ಅಂಜುಮನ್ ಮಿನ್ಹಾಜ್-ಎ-ರಸೂಲ್ ಸಂಸ್ಥೆಯ ಮುಖ್ಯಸ್ಥರಾದ ಮೌಲಾನಾ ಸಯೀದ್ ಹುಸೈನ್ ದೆಹ್ಲಾವಿ ಮಾತನಾಡಿ, ಪಿಓಕೆ ಜನತೆ ಭಾರತ ದೇಶಕ್ಕೆ ಸೇರ್ಪಡೆಗೊಳಿಸಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.
   
ದೆಹ್ಲಾವಿ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಹೆಚ್ಚುತ್ತಿರುವ ಪ್ರತ್ಯೇಕತಾವಾದಿ ಭಯೋತ್ಪಾದನೆಯಿಂದ ಜನತೆ ತೀರಾ ಒತ್ತಡಕ್ಕೆ ಒಳಗಾಗಿದ್ದಾರೆ. ಜನತೆ ಶಾಂತಿಯುತ, ನೆಮ್ಮದಿಯ ಜೀವನ ಸಾಗಿಸಲು ಬಯಸುತ್ತಾರೆ ಅವಕಾಶ ದೊರೆತಲ್ಲಿ ಪಿಓಕೆ ಜನತೆ ಭಾರತಕ್ಕೆ ಸೇರ್ಪಡೆಗೊಳ್ಳುವ ಮತದಾನದಲ್ಲಿ ಭಾಗವಹಿಸಲು ಕೂಡಾ ಸಿದ್ದವಾಗಿದ್ದಾರೆ ಎಂದು ಹೇಳಿದ್ದಾರೆ.
   
ಬಲೂಚಿಸ್ತಾನ್ ಮತ್ತು ಕರಾಚಿ ಜನತೆ ಕೂಡಾ ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಲು ಇಚ್ಚಿಸುತ್ತಾರೆ. ಪ್ರಧಾನಿ ಮೋದಿ ಬಗ್ಗೆ ಪಿಓಕೆ ಜನತೆ ಕೂಡಾ ತುಂಬಾ ಗೌರವ ಹೊಂದಿದ್ದಾರೆ ಎಂದಿದ್ದಾರೆ.  
 
ಪಾಕ್ ಆಕ್ರಮಿತ ಕಾಶ್ಮಿರದ ಜನತೆ ಸ್ವಾತಂತ್ರ್ಯಕ್ಕಾಗಿ ಘೋಷಣೆಗಳನ್ನು ಕೂಗುತ್ತಿರುವುದು ಪಾಕ್ ಸರಕಾರಕ್ಕೆ ಆತಂಕ ಮೂಡಿಸಿದೆ. ಪಾಕ್ ಮಾಧ್ಯಮಗಳು ಕೂಡಾ ವಿಸ್ತಾರವಾಗಿ ವಿಷಯವನ್ನು ಪ್ರಕಟಿಸುತ್ತಿವೆ ಎಂದು ವಿವರಿಸಿದ್ದಾರೆ. 
 
ಕಳೆದ 2014ರ ಸೆಪ್ಟೆಂಬರ್ ತಿಂಗಳಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್  ಪಿಓಕೆಗೆ ಭೇಟಿ ನೀಡಿದಾಗ ಅಲ್ಲಿನ ಜನತೆ ಗೋ ನವಾಜ್ ಗೋ ಎನ್ನುವ ಘೋಷಣೆಗಳನ್ನು ಕೂಗಿದ್ದು ನೋಡಿದಲ್ಲಿ ಪಾಕ್ ಬಗ್ಗೆ ಜನತೆ ಯಾವ ರೀತಿ ಆಕ್ರೋಶ ಹೊಂದಿದ್ದಾರೆ ಎನ್ನುವುದು ಬಹಿರಂಗವಾಗುತ್ತದೆ.  
 
ಪಾಕಿಸ್ತಾನ ಸರಕಾರ ಪಿಓಕೆ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದೆ ಕೇವಲ ಉಗ್ರರ ತಾಣಗಳಿಗಾಗಿ ಬಳಸಿಕೊಳ್ಳುತ್ತಿರುವುದು ಇಲ್ಲಿನ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅಂಜುಮನ್ ಮಿನ್ಹಾಜ್-ಎ-ರಸೂಲ್ ಸಂಸ್ಥೆಯ ಮುಖ್ಯಸ್ಥರಾದ ಮೌಲಾನಾ ಸಯೀದ್ ಹುಸೈನ್ ದೆಹ್ಲಾವಿ ಹೇಳಿದ್ದಾರೆ.

Share this Story:

Follow Webdunia kannada