Select Your Language

Notifications

webdunia
webdunia
webdunia
webdunia

ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಂದಾಗಿ ಮೋದಿ ಕೇಜ್ರಿವಾಲ್ ಭೇಟಿಯಾಗಲಿಲ್ಲ!

ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಂದಾಗಿ ಮೋದಿ ಕೇಜ್ರಿವಾಲ್ ಭೇಟಿಯಾಗಲಿಲ್ಲ!
ನವದೆಹಲಿ , ಮಂಗಳವಾರ, 30 ಜೂನ್ 2015 (17:40 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌‌ಗೆ ಅಪಾಯಿಂಟ್ಮೆಂಟ್ ನೀಡಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿರುವುದರಿಂದ ಅನಿವಾರ್ಯವಾಗಿ ಪ್ರಧಾನಿ ಕಾರ್ಯಾಲಯ ಈ ಕುರಿತು ಸ್ಪಷ್ಟನೆ ನೀಡುವಂತಾಗಿದೆ. 
'ಕೆಲವು ಪ್ರಮುಖ ಪೂರ್ವ ನಿಯೋಜಿತ ಅಪಾಯಿಂಟ್ಮೆಂಟ್‌ಗಳಿಂದಾಗಿ ಕೇಜ್ರಿವಾಲ್ ಭೇಟಿಗೆ ಮೋದಿ ನಿರಾಕರಿಸಿದ್ದಾರೆ. ಸಮಯವಿದ್ದಾಗ ಪ್ರಧಾನಿ ತಮ್ಮನ್ನು ಭೇಟಿಯಾಗಲು ಬಯಸುವವರಿಗೆ ಅವಕಾಶ ಕಲ್ಪಿಸುತ್ತಾರೆ', ಎಂದು ಪಿಎಮ್ಒ ಹೇಳಿದೆ. 
 
'ತುರ್ತು ಅಗತ್ಯವಿದ್ದರೆ ಕೇಜ್ರಿವಾಲ್, ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅಥವಾ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಬಹುದು', ಎಂದು ಪಿಎಂಒ ಸೂಚಿಸಿದೆ.
 
ದೆಹಲಿ ಆಡಳಿತಕ್ಕೆ ಸಂಬಂಧಿಸಿದಂತೆ ತುರ್ತು ವಿಷಯಗಳನ್ನು ಚರ್ಚಿಸಲು ಕೇಜ್ರಿವಾಲ್ ಪ್ರಧಾನಿ ಮೋದಿಯನ್ನು ಭೇಟಿಯಾಗಲು ಅನುಮತಿ ಕೇಳಿದ್ದರು. 
 
'ರಾಜಕೀಯ ವೈರತ್ವದ ಹಿನ್ನೆಲೆಯಲ್ಲಿ ಮೋದಿಯವರು ಈ ಭೇಟಿಗೆ ನಿರಾಕರಿಸಿದ್ದಾರೆ ಎಂಬುದನ್ನು ಅಲ್ಲಗಳೆದಿರುವ ಪಿಎಂಒ ಮೋದಿಯವರ ಜತೆಗಿನ ಭೇಟಿಗೆ ಬಹುದೊಡ್ಡ ವೇಟಿಂಗ್ ಲಿಸ್ಟ್ ಇದೆ. ಬಹಳ ಪ್ರಧಾನವಾದ ಕಾರ್ಯಕ್ರಮಗಳಿಗೆ, ಭೇಟಿಗೆ ಅವರು ಪ್ರಥಮ ಆದ್ಯತೆ ನೀಡುತ್ತಾರೆ', ಎಂದು ಹೇಳಿದೆ.
 
10 ದಿನಗಳ ಹಿಂದೆ ಕೇಜ್ರಿವಾಲ್ ಮೋದಿಯವರನ್ನು ಭೇಟಿಯಾಗಲು ಬಯಸಿ ಪ್ರಧಾನಿ ಕಚೇರಿಗೆ ಮನವಿ ಕಳುಹಿಸಿದ್ದರು.

Share this Story:

Follow Webdunia kannada