Daily Horoscope
✕

ಮೋದಿ ನಮ್ಮನ್ನ ಜೈಲಿಗೆ ಕಳುಹಿಸಬಹುದು ಆದ್ರೆ ಮಣಿಸಲು ಸಾಧ್ಯವಿಲ್ಲ: ಮಮತಾ

Webdunia
ಶನಿವಾರ, 16 ಡಿಸೆಂಬರ್ 2023 (13:40 IST)
ನಾನು ಯಾರಿಗೂ ಹೆದರುವುದಿಲ್ಲ. ಮೋದಿ ಅಧಿಕಾರದಲ್ಲಿರುವುದರಿಂದ ನನ್ನನ್ನು ಜೈಲಿಗೆ ಕಳುಹಿಸಬಹುದು. ಆದರೆ ನಮ್ಮನ್ನು ಮಣಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಕೀಯ ಪಕ್ಷಗಳನ್ನು ಬೆದರಿಸುತ್ತಿದ್ದಾರೆ. ಅವರಿಗೆ ತಾಕತ್ತಿದ್ರೆ ನನ್ನನ್ನು ಜೈಲಿಗೆ ಕಳುಹಿಸಲಿ. ಆದರೆ, ಕೇಂದ್ರ ಸರಕಾರದ ಅನೀತಿಗಳ ಮುಂದೆ ತಲೆಬಾಗುವುದಿಲ್ಲ ಎಂದು ಗುಡುಗಿದ್ದಾರೆ.
 
ಕೇಂದ್ರ ಸರಕಾರದ  ಕುರಿತಂತೆ ತೃಣಮೂಲ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದಂತೆ ಕೋಲ್ಕತಾದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚಿಟ್ ಫಂಡ್ ಹಗರಣವನ್ನು ಎತ್ತಿದ್ದಾರೆ. ಪ್ರಧಾನಿ ದೇಶದ ವಿಷಯಗಳ ಬಗ್ಗೆ ಗಂಭೀರವಾಗಿರಬೇಕು ಎಂದು ಸಲಹೆ ನೀಡಿದರು. 
 
ಪ್ರಧಾನಿ ಮೋದಿ ವಿಪಕ್ಷಗಳನ್ನು ಬೆದರಿಸುತ್ತಿದ್ದಾರೆ. ಇಂತಹ ಕೇಂದ್ರ ಸರಕಾರವನ್ನು ನಾವು ಯಾವತ್ತೂ ನೋಡಿರಲಿಲ್ಲ. ಪ್ರಧಾನಿಗೆ ಗಂಭೀರತೆಯ ಕೊರತೆಯಿದೆ ಎಂದು ಲೇವಡಿ ಮಾಡಿದ್ದಾರೆ.
 
ಕೆಲ ರಾಜಕೀಯ ಪಕ್ಷಗಳು ಕೇಂದ್ರ ಸರಕಾರದ ನಿಲುವುಗಳ ಕುರಿತಂತೆ ಮೌನವಾಗಿವೆ. ಯಾಕೆಂದರೆ ಮೋದಿ ಆಯಾ ಪಕ್ಷಗಳನ್ನು ಪ್ರತಿನಿತ್ಯ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ವೋಟ್ ಚೋರಿ ಪ್ರತಿಭಟನೆಯಲ್ಲಿ ಫ್ರೀ ಪ್ಯಾಲೆಸ್ತೀನ್ ಸ್ಲೋಗನ್: ಇದೇನು ಭಾರತ ವಿರೋಧಿ ಹೋರಾಟವೇ ಎಂದ ನೆಟ್ಟಿಗರು

ಚುನಾವಣಾ ಆಯೋಗದ ಪರ ನಿಂತ 42 ಮಾಜಿ ನ್ಯಾಯಾಧೀಶರು: ಬಹಿರಂಗ ಪತ್ರದ ಮೂಲಕ ಎಚ್ಚರಿಕೆ

ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಾಶ್ಮೀರಿ ಯುವಕನ ಮೇಲೆ ಹಲ್ಲೆ: Video

ದೆಹಲಿ ಪೊಲೀಸರಿಂದ ಗೂಂಡಾಗಿರಿ, ಅಕ್ಟೋಬರ್ 10ರಿಂದ ಮತ ಉಳಿಸಿ ದೇಶ ಉಳಿಸಿ ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್

ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳಿಂದ ಪುಕ್ಕಟೆ ಘೋಷಣೆ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments