Webdunia - Bharat's app for daily news and videos

Install App

ಜೂನ್ 22 ರಂದು ಪ್ರಧಾನಿ ಮೋದಿ ಸಚಿವ ಸಂಪುಟ ಪುನಾರಚನೆ

Webdunia
ಗುರುವಾರ, 16 ಜೂನ್ 2016 (20:54 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಬಹುನಿರೀಕ್ಷಿತ ಸಂಪುಟ ವಿಸ್ತರಣೆಯನ್ನು ಜೂನ್ 22 ರಂದು ನಡೆಸಲು ನಿರ್ಧರಿಸಿದ್ದು, ಚುನಾವಣೆ ರಾಜ್ಯಗಳಾದ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
 
ಉತ್ತರಾಖಂಡ್‌ನ ಬಿಜೆಪಿ ಮುಖಂಡ ಭಗತ್ ಸಿಂಗ್ ಕೋಶಿಯಾರಿ, ಆಸ್ಸಾಂನಿಂದ ರಾಮೇಶ್ವರ್ ತೇಲಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.
 
ಸರ್ಬಾನಂದ್ ಸೋನೋವಾಲ್ ಆಸ್ಸಾಂ ಮುಖ್ಯಮಂತ್ರಿಯಾಗಿದ್ದರಿಂದ ಅವರಿಂದ ತೆರವಾದ ಕ್ರೀಡಾ ಇಲಾಖೆ (ಸ್ವತಂತ್ರ) ರಾಮೇಶ್ವರ್ ಪಾಲಾಗುವ ಸಾಧ್ಯತೆಗಳಿವೆ.
 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೂನ್ 18 ರಂದು ವಿದೇಶದಿಂದ ಮರಳಲಿದ್ದಾರೆ, ಪ್ರಧಾನಿ ಮೋದಿ ಜೂನ್ 23 ರಂದು ವಿದೇಶ ಪ್ರವಾಸಕ್ಕೆ ಹೊರಡಲಿದ್ದಾರೆ. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯಿಂರುವುದರಿಂದ ಜೂನ್ 22 ರಂದು ಸಂಪುಟ ವಿಸ್ತರಣೆ ಖಚಿತವಾಗಿದೆ
 
ಸಚಿವ ಸಂಪುಟದಲ್ಲಿರುವ ಕೆಲ ಅಸಮರ್ಥ ಸಚಿವರಿಗೆ ಕೊಕ್ ನೀಡಿ, ಹೊಸ ಮುಖಗಳಿಗೆ ಮಣೆಹಾಕಲಿದ್ದಾರೆ ಎನ್ನಲಾಗಿದೆ.
 
ಹಿರಿಯ ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿಯವರ ಖಾತೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಂಧನ ಭೀತಿಯಲ್ಲಿ ಕೋರ್ಟ್ ಮೊರೆ ಹೋದ ಬೈರತಿ ಬಸವರಾಜ್

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ ನೋಡೋಣ: ವಿಜಯೇಂದ್ರ

Video: ಸಂಸದೆ ಕಂಗನಾ ರನೌತ್ ಕಾಲ ಬಳಿ ಕೂತು ವೃದ್ಧರು ಸಮಸ್ಯೆ ಹೇಳಿದರೂ ಕರಗದ ಮನಸ್ಸು

ನಿಮಿಷ ಪ್ರಿಯಗೆ ಈಗ ಒಂದೊಂದು ನಿಮಿಷವೂ ನರಕ: ಮೆಹ್ದಿ ಕುಟುಂಬ ಹೇಳಿದ್ದೇನು

ಟ್ಯಾಬ್ಲೆಟ್ ತೆಗೆದುಕೊಳ್ಳದೇ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಉಪಾಯ

ಮುಂದಿನ ಸುದ್ದಿ
Show comments