Webdunia - Bharat's app for daily news and videos

Install App

ಸಚಿವ ಆಜಂ ಖಾನ್ ಒಬ್ಬ ಉಗ್ರ; ದಾವೂದ್, ಅಬು ಸಲೇಂ ಸಂಬಂಧಿಕ?

Webdunia
ಸೋಮವಾರ, 22 ಡಿಸೆಂಬರ್ 2014 (10:33 IST)
ಉತ್ತರಪ್ರದೇಶದ ಸರಕಾರದ ಸಚಿವ ಆಜಂ ಖಾನ್ ಭಯೋತ್ಪಾದಕ ಎನ್ನುವುದರ ಮೂಲಕ ಕೇಂದ್ರದ ಕೃಷಿ ರಾಜ್ಯ ಮಂತ್ರಿ ಸಂಜೀವ್ ಬಲಿಯಾನ್ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. 
ಆಜಂ ಕಾನ್ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಉಗ್ರ ಸಂಘಟನೆ ಎಂದು ಆರೋಪಿಸಿದ್ದಕ್ಕೆ ಪ್ರತಿಯಾಗಿ ಬಲಿಯಾನ್ ಈ ಹೇಳಿಕೆ ನೀಡಿದ್ದಾರೆ. 
 
ಉತ್ತರಪ್ರದೇಶದ ಮುಜಪ್ಫರ್ ನಗರದಲ್ಲಿ ರೈತರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಆಜಂ ಖಾನ್ ಸ್ವತಃ ತಾವೇ ಒಬ್ಬ ಭಯೋತ್ಪಾದಕರಾಗಿದ್ದಾರೆ. ಅವರು ಉಗ್ರರ ಜತೆ ಹಣವನ್ನು ಪಡೆದುಕೊಂಡು ಜನ್ಮದಿನವನ್ನು ಆಚರಿಸುತ್ತಾರೆ.  ರಾಜ್ಯದಲ್ಲಿ ನಡೆಯುವ ಎಲ್ಲ ದಂಗೆಗಳ ಹಿಂದೆ ಅವರ  ಹೆಸರು ಕೇಳಿಬರುತ್ತದೆ. ಅಪರಾಧಿಗಳನ್ನು ರಕ್ಷಿಸುವ ಕೆಲಸವನ್ನವರು ಮಾಡುತ್ತಾರೆ. ನಿಜವಾದ ಅಪರಾಧಿ ಖಾನ್ ಅವರೇ. ಅವರನ್ನು ಮುಖ್ಯಮಂತ್ರಿಗಳು ಮೊದಲು ವಜಾ ಮಾಡಬೇಕು ಎಂದರು. 
 
 
ಇನ್ನೊಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ  ಬಿಜೆಪಿ ಶಾಸಕ ಸುರೇಶ್ ರಾಣಾ ಒಂದು ಹೆಜ್ಜೆ ಮುಂದೆ ಹೋಗಿ ಆಜಂ ಖಾನ್, ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಉಗ್ರ  ಅಬು ಸಲೇಂ ಸಂಬಂಧಿಕ, ಈ ಕುರಿತು ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 
ಬಲವಂತದ ಮತಾಂತರದ ಕುರಿತು ಮಾತನಾಡಿದ ಅವರು ತಾನು ಕೂಡ ಇದನ್ನು ವಿರೋಧಿಸುತ್ತೇನೆ, ಆದರೆ ಸ್ವಇಚ್ಛೆಯಿಂದ, ಸ್ವಧರ್ಮಕ್ಕೆ ಮರಳ ಬಯಸಿದರೆ ಅದನ್ನು ಸ್ವಾಗತಿಸಬೇಕು ಎಂದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments