Select Your Language

Notifications

webdunia
webdunia
webdunia
webdunia

ಜಾತಿವಾದವನ್ನು ಕಿತ್ತೊಗೆಯಿರಿ, ಅಭಿವೃದ್ಧಿಯತ್ತ ನಡೆಯಿರಿ: ಬಿಹಾರದಲ್ಲಿ ಮೋದಿ

ಜಾತಿವಾದವನ್ನು ಕಿತ್ತೊಗೆಯಿರಿ, ಅಭಿವೃದ್ಧಿಯತ್ತ ನಡೆಯಿರಿ: ಬಿಹಾರದಲ್ಲಿ ಮೋದಿ
ನವದೆಹಲಿ , ಶುಕ್ರವಾರ, 22 ಮೇ 2015 (16:02 IST)
ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ಮತದಾರರಲ್ಲಿ ಜಾತೀಯತೆ ಕಿತ್ತೊಗೆದು ಅತ್ಯಂತ ಸದ್ಗುಣಶೀಲರಿಗೆ ಮತವನ್ನು ನೀಡಿ ಎಂದು ಪ್ರಧಾನಿ ಮೋದಿಯವರು ಮನವಿ ಮಾಡಿದ್ದಾರೆ. 

ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಕೃತಿಗಳ ಸುವರ್ಣ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದ ಪ್ರಧಾನಿ, "ರಾಜ್ಯದ ಪ್ರಗತಿ ಮತ್ತು ಸಮೃದ್ಧಿಯ ವಿಷಯದಲ್ಲಿ ತಾವು ಬದ್ಧರಾಗಿದ್ದೇವೆ", ಎಂದಿದ್ದಾರೆ. 
 
ಪಶ್ಚಿಮ ಭಾರತ ಸಮೃದ್ಧಿಯನ್ನು ಹೊಂದಿದ್ದರೆ, ಪೂರ್ವಭಾಗ ಜ್ಞಾನವನ್ನು ಹೊಂದಿದೆ. ದೇಶದ ಎರಡು ವಿಭಾಗಗಳು ದೇಶದ ಅಭಿವೃದ್ಧಿಯಲ್ಲಿ ಸಮಾನ ಪಾಲು ಹೊಂದಬಹುದು ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ. 
 
ಕವಿ ದಿನಕರ್ 1961 ರಲ್ಲಿ ಬರೆಯ ಒಂದು ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ಅವರು, "ಬಿಹಾರ ಜನತೆ ಜಾತಿ ಪದ್ಧತಿಯನ್ನು ಮೀರಿ ನಡೆಯಬೇಕು ಮತ್ತು ಪ್ರಾಮಾಣಿಕರಿಗೆ ಬೆಂಬಲ ನೀಡಬೇಕು. ನೀವು ಒಂದು ಅಥವಾ ಎರಡು ಜಾತಿಗಳ ಸಹಾಯದಿಂದ ಆಡಳಿತ ನಡೆಸಲು ಸಾಧ್ಯವಿಲ್ಲ.  ಜಾತಿಪದ್ಧತಿಯನ್ನು ಕಿತ್ತೆಸೆಯದಿದ್ದರೆ ಬಿಹಾರದ ಸಾಮಾಜಿಕ ಬೆಳವಣಿಗೆ ಕುಂಠಿತಗೊಳ್ಳಲಿದೆ", ಎಂದು ಎಚ್ಚರಿಗೆ ನೀಡಿದ್ದಾರೆ. 

Share this Story:

Follow Webdunia kannada