Webdunia - Bharat's app for daily news and videos

Install App

ಲೈಂಗಿಕ ಕಿರುಕುಳ ತಡೆಯಲು ರಿವಾಲ್ವರ್ ಹೊರತೆಗೆದ ಮಾಡೆಲ್

Webdunia
ಮಂಗಳವಾರ, 13 ಅಕ್ಟೋಬರ್ 2015 (13:57 IST)
ಶಾಪಿಂಗ್‌ಮಾಲ್‌ನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಲೈಂಗಿಕ ಕಿರುಕುಳ ತಡೆಯಲು ಮುಂಬೈ ಮೂಲದ ರೂಪದರ್ಶಿಯೊಬ್ಬಳು ರಿವಾಲ್ವರ್‌ ಹೊರತೆಗೆದ ಘಟನೆ ವರದಿಯಾಗಿದೆ.
 
ಇಂದು ಬೆಳಿಗ್ಗೆ 9 ಗಂಟೆಗೆ ಮೆಟ್ರೋ ನಿಲ್ದಾಣದ ಬಳಿಯಿರುವ ಕೋರಲ್‌ಬಾಗ್‌ ಬಳಿಯ ಶಾಪಿಂಗ್‌ ಮಾಲ್‌ಗೆ ಗೆಳತಿಯರೊಂದಿಗೆ ರೂಪದರ್ಶಿ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಬಿಲ್ ಪಾವತಿಸಲು ಬಿಲ್ ಕೌಂಟರ್ ಬಳಿ ನಿಂತಿದ್ದ ರೂಪದರ್ಶಿಗೆ, ಇಬ್ಬರು ವ್ಯಕ್ತಿಗಳು ಅಸಭ್ಯ ಪದಗಳನ್ನು ಬಳಸಿದ್ದಲ್ಲದೇ ಆಕೆಯನ್ನು ಮುಟ್ಟಲು ಪ್ರಯತ್ನಿಸಿದಾಗ, ಆಕೆ ಬ್ಯಾಗ್‌ನಿಂದ ರಿವಾಲ್ವರ್ ತೆಗೆದು ಬೆದರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   
 
ಶಾಪಿಂಗ್ ಮಾಲ್ ವ್ಯವಸ್ಥಾಪಕ ಮತ್ತು ಇತರ ಗ್ರಾಹಕರು ಸೇರುತ್ತಿರುವುದನ್ನು ಕಂಡ ಆರೋಪಿಗಳು ಪರಾರಿಯಾಗಿದ್ದಾರೆ. 
 
ಮುಂಬೈ ರೂಪದರ್ಶಿ ರಾಜೇಂದ್ರ ನಗರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಶಾಪಿಂಗ್ ಮಾಲ್‌ನ ಸಿಸಿಟಿವಿಗಳಿಂದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲಿ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ