Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಮಾಡೆಲ್ ವೃತ್ತಿಯಲ್ಲಿದ್ದ ಯುವತಿಯ ಶವವಾಗಿ ಪತ್ತೆ

ಮುಂಬೈನಲ್ಲಿ ಮಾಡೆಲ್ ವೃತ್ತಿಯಲ್ಲಿದ್ದ ಯುವತಿಯ ಶವವಾಗಿ ಪತ್ತೆ
ಮುಂಬೈ , ಭಾನುವಾರ, 17 ಮೇ 2015 (17:44 IST)
ನಗರದಲ್ಲಿ ಮಾಡೆಲ್ ವೃತ್ತಿಯಲ್ಲಿದ್ದ 30 ವರ್ಷದ ಯುವತಿಯೊಬ್ಬಳನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ವರ್ಸೋವಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಾಡೆಲ್ ಯುವತಿ, ತನ್ನ ಮನೆಯ ಶೌಚಾಲದಲ್ಲಿ ಶವವಾಗಿ ಬಿದ್ದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ,
 
ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ರೂಪದರ್ಶಿಯನ್ನು ಕೊಲೆಗೈದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಕಳೆದ ರಾತ್ರಿಯೇ ಯುವತಿಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.   
 
ಪೊಲೀಸರು ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸುತ್ತಿದ್ದು ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

Share this Story:

Follow Webdunia kannada