Select Your Language

Notifications

webdunia
webdunia
webdunia
webdunia

ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ: 24 ವರ್ಷದ ವ್ಯಕ್ತಿ ಸಾವು

ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ: 24 ವರ್ಷದ ವ್ಯಕ್ತಿ ಸಾವು
ನವದೆಹಲಿ , ಶನಿವಾರ, 20 ಡಿಸೆಂಬರ್ 2014 (15:50 IST)
ಚಾರ್ಜ್‌ಗಿಟ್ಟಿದ್ದ ಮೊಬೈಲ್ ಫೋನ್ ಏಕಾಯೇಕಿ ಸ್ಫೋಟಗೊಂಡು 24 ವರ್ಷದ ವ್ಯಕ್ತಿ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ. ನೈನ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ಮ ಗ್ರಾಮದಲ್ಲಿ ಈ ಪ್ರಕರಣ ವರದಿಯಾಗಿದೆ. 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ  ರಾಜುಲಾಲ್ ಗುರ್ಜಾರ್, ಎಂಬಾತ ಶುಕ್ರವಾರ ತನ್ನ ಮೊಬೈಲ್ ಫೋನ್‌ನ್ನು ಚಾರ್ಜಿಗಿಟ್ಟುಕೊಂಡು ಬಳಸುತ್ತಿದ್ದ . ಇದ್ದಕ್ಕಿದ್ದಂತೆ, ದೊಡ್ಡ ಶಬ್ಧದೊಂದಿಗೆ ಮೊಬೈಲ್ ಬ್ಯಾಟರಿ ಸ್ಪೋಟಗೊಂಡಿತು. ಗುರ್ಜಾರ್ ಎದೆ ಮತ್ತು ಕೈಗೆ ತೀವ್ರ ಸುಟ್ಟ ಗಾಯಗಳಾದವು. 
 
ತಕ್ಷಣಕ್ಕೆ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ, ಅವರು ಬದುಕುಳಿದಿಲ್ಲ ಎಂದು ವೈದ್ಯರು ಘೋಷಿಸಿದರು. 
 
ಶವದ ಮರಣೋತ್ತರ ಪರೀಕ್ಷೆ ನಡೆಸಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ ಸಮಂದರ್ ಲಾಲ್ ಮೀನಾ, ವಿದ್ಯುತ್ ಶಾಕ್ ಮತ್ತು  ಸುಟ್ಟ ಗಾಯಗಳಿಂದ ಆತ ಸಾವನಪ್ಪಿದ್ದಾನೆ ಎಂದು ವರದಿ ನುಡಿದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಯುತ್ತಿದೆ. 

Share this Story:

Follow Webdunia kannada