Select Your Language

Notifications

webdunia
webdunia
webdunia
webdunia

ಶಾಸಕರಿಗೆ 80 ಸಾವಿರ ಸಂಬಳ, ಮನೆ ಬಾಡಿಗೆ ಕೇವಲ 3 ರೂಪಾಯಿಗಳಂತೆ..!

ಶಾಸಕರಿಗೆ 80 ಸಾವಿರ ಸಂಬಳ, ಮನೆ ಬಾಡಿಗೆ ಕೇವಲ 3 ರೂಪಾಯಿಗಳಂತೆ..!
ನವದೆಹಲಿ , ಶುಕ್ರವಾರ, 1 ಆಗಸ್ಟ್ 2014 (18:08 IST)
ನಮ್ಮಿಂದ ಆಯ್ಕೆಯಾಗಿ ಹೋಗುವ ಜನಪ್ರತಿನಿಧಿಗಳು ಪ್ರತಿ ತಿಂಗಳಿಗೆ 70,000 ದಿಂದ 80,000 ದವರೆಗಿನ ದೊಡ್ಡ ಮೊತ್ತದ  ಸಂಬಳ ಪಡೆಯುವ ಹೊರತಾಗಿಯೂ ಅವರಿಗೆ ನೀಡಲಾಗುವ ಸರಕಾರಿ ಬಂಗಲೆಯ ಬಾಡಿಗೆ ಎಷ್ಟು ಗೊತ್ತೆ??  ಕೇವಲ  ಮೂರು ರೂಪಾಯಿ. 

ಈ ಕುರಿತು  ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ  ಆಕ್ಸ್ಫಾಮ್‌ನ ವಿಜಯೇಂದ್ರ ಹೇಳುವ ಪ್ರಕಾರ  ಕೈಯ್ಯಲ್ಲಿ 3 ರೂಪಾಯಿಗಳ ಕನಿಷ್ಠ ಮೊತ್ತವನ್ನಿಟ್ಟುಕೊಂಡು ಛತ್ತಿಸ್‌ಗಡ್‌ನ ಡಿ ಗ್ರೇಡ್ ಹೊಟೆಲ್‌ಗೆ ಬರುವ ವ್ಯಕ್ತಿಗೆ  ಒಳಗೆ ಕೂಡ ಪ್ರವೇಶ ನೀಡಲಾಗುವುದಿಲ್ಲ. ಆದರೆ  ಬೃಹತ್ ಬಂಗಲೆಗಳಿಗೆ ಸರಕಾರ ಕೇವಲ 3 ರೂಪಾಯಿಗಳ ಬಾಡಿಗೆ ಪಡೆಯುತ್ತಿದೆ ಎನ್ನುತ್ತಾರೆ. 
 
ನಾವು ಸೆಮಿನಾರ್ ಅಥವಾ ಕಾರ್ಯಾಗಾರ ನಡೆಸಲು ಸ್ಥಳಕ್ಕಾಗಿ ಅರ್ಜಿ ಸಲ್ಲಿಸಿದರೆ, ಸಾಮಾನ್ಯವಾಗಿ  ನಮ್ಮ ಮನವಿಗಳನ್ನು ಕಡೆಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ  ನಮ್ಮ ಕಾರ್ಯಕ್ರಮಗಳನ್ನು ನಾವು ಹೊಟೇಲುಗಳಲ್ಲಿ ಆಯೋಜಿಸುತ್ತೇವೆ. ನಾವು ಬಿಲ್ಲುಗಳನ್ನು , ಆದಾಯ ತೆರಿಗೆ ರಿಟರ್ನ್ಸನ್ನು ಫೈಲ್ ಮಾಡಬೇಕಾಗುತ್ತದೆ. ಆದರು ಕೂಡ ಬಿಜೆಪಿ ಕಡೆಯವರು ನಾವು ಜನರನ್ನು ಲೂಟಿ ಮಾಡುತ್ತೇವೆ ಎಂದು ಆರೋಪಿಸುತ್ತಾರೆ ಎನ್ನುತ್ತಾರೆ  ಸಮತಾ ಹೋರಾಟಗಾರ ಕಿಶೋರ್ .
 
ಸಂಸದರ ಬಂಗಲೆಗಳಿಗೂ ಕೂಡ ಇತರ ಸರಕಾರಿ ನೌಕರರಂತೆ ಬಾಡಿಗೆ ನಿಗದಿ ಪಡಿಸಬೇಕು ಎಂದು ಮಾಜಿ ಬಿಜೆಪಿ ಸಂಸದ ಮತ್ತು ಎಕ್ಟಿವಿಸ್ಟ್  ವೀರೇಂದ್ರ ಪಾಂಡೆ ಹೇಳಿದರೆ, ಐಡಿಎಫ್‌ಸಿ ಮ್ಯೂಚುಯಲ್ ಫಂಡ್‌ನಲ್ಲಿ ಕೆಲಸ ಮಾಡುವ ನಿಶು " ಇದು ನಮ್ಮ ಮೇಲಿನ  ಹೆಚ್ಚುವರಿ ಹೊರೆ ಆಗಿದೆ . ತೆರಿಗೆ ಪಾವತಿ ಮಾಡುವ ನಾವು  ಕಷ್ಟ ಪಟ್ಟು ಗಳಿಸಿದ ಹಣದಿಂದ ಅವರು ಸುಖ ಪಡುತ್ತಾರೆ  ಎಂದು ಮಡುಗಟ್ಟಿದ್ದ ಆಕ್ರೋಶವನ್ನು ಹೊರಹಾಕುತ್ತಾರೆ. 
 
ಶಾಸಕರು, ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ ರೂ 25,000, ದೈನಂದಿನ ಭತ್ಯೆಯಾಗಿ ರೂ 750 ಪಡೆಯುತ್ತಾರೆ. ಒಬ್ಬ  ಶಾಸಕ  ಕನಿಷ್ಠ ರೂ 47,000 ಭತ್ತೆಯನ್ನು ಪಡೆಯುತ್ತಾನೆ ಎನ್ನುತ್ತಾರೆ ಹೆಸರು ಹೇಳಲು ಬಯಸದ ಓರ್ವ ಸರಕಾರಿ ಅಧಿಕಾರಿ. 

Share this Story:

Follow Webdunia kannada