Select Your Language

Notifications

webdunia
webdunia
webdunia
webdunia

ಸೋಮನಾಥ್ ಭಾರ್ತಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ

ಸೋಮನಾಥ್ ಭಾರ್ತಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ
ನವದೆಹಲಿ , ಮಂಗಳವಾರ, 29 ಸೆಪ್ಟಂಬರ್ 2015 (19:39 IST)
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಶರಣಾದ ಆಪ್ ಶಾಸಕ ಸೋಮನಾಥ್ ಭಾರ್ತಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
 
ಪತ್ನಿ ಲಿಪಿಕಾ ಮಿತ್ರಾ ದಾಖಲಿಸಿದ ಕೌಟಂಬಿಕ ದೌರ್ಜನ್ಯದಡಿ ಆರೋಪಿಯಾಗಿರುವ ಸೋಮನಾಥ್ ಭಾರ್ತಿ ತಮ್ಮ ವಕೀಲರೊಂದಿಗೆ ಪಶ್ಚಿಮ ದೆಹಲಿಯ ದ್ವಾರಕಾ ಪೊಲೀಸ್ ಠಾಣೆಯಲ್ಲಿ ಶರಣಾಗುತ್ತಿದ್ದಂತೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. 
 
ಕೌಟಂಬಿಕ ದೌರ್ಜನ್ಯ ಮತ್ತು ಪತ್ನಿಯ ಹತ್ಯಾಯತ್ನ ಪ್ರಕರಣದ ಆರೋಪ ಎದುರಿಸುತ್ತಿರುವ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿಯವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. 
 
ಸೋಮನಾಥ್ ಭಾರ್ತಿಯವರ ವರ್ತನೆಯಿಂದ ಅವರ ಕುಟುಂಬಕ್ಕೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ ಮಾರನೇ ದಿನವೇ ಸೋಮನಾಥ್ ಭಾರ್ತಿ ಪೊಲೀಸರಿಗೆ ಶರಣಾಗಿದ್ದಾರೆ.

Share this Story:

Follow Webdunia kannada