Select Your Language

Notifications

webdunia
webdunia
webdunia
webdunia

ದಾರಿತಪ್ಪಿದ ವ್ಯಕ್ತಿಗಳು ಇಸ್ಲಾಂ ಸಂದೇಶವನ್ನು ತಿರುಚುತ್ತಿದ್ದಾರೆ: ನಖ್ವಿ

ದಾರಿತಪ್ಪಿದ ವ್ಯಕ್ತಿಗಳು ಇಸ್ಲಾಂ ಸಂದೇಶವನ್ನು ತಿರುಚುತ್ತಿದ್ದಾರೆ: ನಖ್ವಿ
ಲಕ್ಸರ್(ಈಜಿಪ್ತ್) , ಬುಧವಾರ, 18 ನವೆಂಬರ್ 2015 (18:52 IST)
ಕೆಲ ದಾರಿತಪ್ಪಿದ ವ್ಯಕ್ತಿಗಳು ಇಸ್ಲಾಂನ ದಯೆ, ಏಕತೆ ಮತ್ತು ಶಾಂತಿಯ ನಿಜವಾದ ಸಂದೇಶವನ್ನು ಮರೆಮಾಚುತ್ತಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
 
ಪ್ಯಾರಿಸ್‌ನ ಐಸಿಎಸ್ ಉಗ್ರರು ಆರು ಸ್ಥಳಗಳಲ್ಲಿ ದಾಳಿ ನಡೆಸಿ 129 ಜನರನ್ನು ಹತ್ಯೆ ಮಾಡಿದ್ದಲ್ಲದೇ 300 ಜನತೆ ಗಾಯಗೊಂಡಿರುವ ಘಟನೆಗೆ ನಾವೇ ಹೊಣೆ ಎಂದು ಐಸಿಎಸ್ ಉಗ್ರರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಖ್ವಿ ಹೇಳಿಕೆ ಹೊರಬಿದ್ದಿದೆ.
 
ಇಸ್ಲಾಮಿಕ್ ವ್ಯವಹಾರಗಳ ಸರ್ವೋಚ್ಚ ಸಮಿತಿಯ 25 ಅಂತಾರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಯೋತ್ಪಾದನೆ ಮತ್ತು ಕೋಮುವಾದ ಮಾನವತೆಯ ಮತ್ತು ಇಸ್ಲಾಂ ಧರ್ಮದ ಪರಮ ಶತ್ರುಗಳು ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ 42 ದೇಶಗಳ ಖ್ಯಾತ ಮೌಲ್ವಿಗಳು, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.  
 
ಭಾರತ ದೇಶದಲ್ಲಿ ಸಶಕ್ತ ಪ್ರಜಾಪ್ರಭುತ್ವ ಮತ್ತು ಸಾಂಸ್ಕ್ರತಿಕ ಏಕತೆ ಆಳವಾಗಿ ಬೇರೂರಿರುವುದರಿಂದ ಭಯೋತ್ಪಾದನೆ ಸಫಲವಾಗಿಲ್ಲ. ಇಸ್ಲಾಮ್ ರಾಷ್ಟ್ರಗಳು ಮತ್ತು ಇಸ್ಲಾಂ ಬುದ್ದಿಜೀವಿಗಳು ಮುಂದೆ ಬಂದು ಭಯೋತ್ಪಾದನೆ ಮತ್ತು ಕೋಮುವಾದವನ್ನು ನಿಗ್ರಹಿಸಲು ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
 
ಇಸ್ಲಾಂನಲ್ಲಿ ಹತ್ಯೆ ಮಹಾಪಾಪವಾಗಿದೆ. ಹತ್ಯೆ ಮಾಡುವ ವ್ಯಕ್ತಿಗೆ ಸ್ವರ್ಗದಲ್ಲಿ ಸ್ಥಳವಿಲ್ಲ ಎಂದು ಪ್ರವಾದಿ ಮೊಹಮ್ಮದ್ ಎಚ್ಚರಿಕೆಯ ಸಂದೇಶ ರವಾನಿಸಿದ್ದರು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

Share this Story:

Follow Webdunia kannada