Select Your Language

Notifications

webdunia
webdunia
webdunia
webdunia

ಮಕ್ಕಳ ಗುದದ್ವಾರಕ್ಕೆ ಪೆಟ್ರೋಲ್ ಇಂಜೆಕ್ಷನ್ ನೀಡಿದ ರಕ್ಕಸರು... !

ಮಕ್ಕಳ ಗುದದ್ವಾರಕ್ಕೆ ಪೆಟ್ರೋಲ್ ಇಂಜೆಕ್ಷನ್ ನೀಡಿದ ರಕ್ಕಸರು... !
ಗಾಜಿಯಾಬಾದ್ , ಬುಧವಾರ, 19 ಅಕ್ಟೋಬರ್ 2016 (15:54 IST)

ಗಾಜಿಯಾಬಾದ್: ಸಮಾಜವಾದಿ ಪಕ್ಷದ ಹಾಜಿ ಎಹ್ಸಾನ್ ಕುರೇಶಿಯ ಸಹೋದರ ರಿಜ್ವಾನ್ ಕುರೇಶಿ ಮತ್ತು ಆತನ ಸಹಚರರು, ಮೊಬೈಲ್ ಕದ್ದಿದ್ದಾರೆ ಎಂದು ಇಬ್ಬರು ಬಾಲಕರ ಗುದದ್ವಾರಕ್ಕೆ ಪೆಟ್ರೋಲ್ ಇಂಜೆಕ್ಷನ್ ನೀಡಿ ಚಿತ್ರಹಿಂಸೆಗೆ ಒಳಪಡಿಸಿದ ಘಟನೆ ತಡವಾಗಿ ವರದಿಯಾಗಿದೆ.
 


 

ಬಾಲಕರಿಬ್ಬರು ಐದನೇ ಕ್ಲಾಸಿಗೆ ಹೋಗುತ್ತಿರುವವರೆಂದು ಗುರುತಿಸಲಾಗಿದೆ. ಇವರಿಬ್ಬರು ರಿಜ್ವಾನ್ ನ ಮೊಬೈಲ್ ಕದ್ದಿದ್ದರು ಎನ್ನಲಾಗುತ್ತಿದೆ. ಅದನ್ನೇ ಕಾರಣವಾಗಿಟ್ಟುಕೊಂಡು ರಿಜ್ವಾನ್ ತನ್ನ ಸಹಚರರ ಜತೆ ಸೇರಿಕೊಂಡು ಕಳೆದ ೧೭ ರಂದು, ಪಶುಗಳಿಗೆ ನೀಡುವ ಸಿರೇಂಜ್ ಗೆ ಪೆಟ್ರೋಲ್ ತುಂಬಿ ಆ ಬಾಲಕರ ಗುದದ್ವಾರಕ್ಕೆ ಇಂಜೆಕ್ಟ್ ಮಾಡಿದ್ದಾನೆ. ಅದಾದ ಕೆಲವೇ ಕ್ಷಣದಲ್ಲಿ ಬಾಲಕರಿಬ್ಬರು ತಾವಿದ್ದ ಸ್ಥಳದಲ್ಲಿಯೇ ಬಿದ್ದು ವಿಲವಿಲನೆ ಒದ್ದಾಡಿದ್ದಾರೆ.

 

ಅದನ್ನು ಗಮನಿಸಿದ ದಾರಿಹೋಕರು ಕೂಡಲೇ ಬಾಲಕರಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ಆದರೆ, ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ದೆಹಲಿ ಆಸ್ಪತ್ರೆಗೆ ಬಾಲಕರಿಬ್ಬರನ್ನು ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಜೆಕ್ಷನ್ ಮೂಲಕ ಪೆಟ್ರೋಲ್ ದೇಹದ ನರನಾಡಿಗಳಿಗೆ ವ್ಯಾಪಿಸಿರುವುದರಿಂದ, ಅವರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಎರಡು ದಿನಗಳವರೆಗೆ ಯಾವುದೇ ಉತ್ತರ ನೀಡಲಾಗದು ಎಂದು ಅಲ್ಲಿಯ ವೈದ್ಯರು ತಿಳಿಸಿದ್ದಾರೆ. ಆರೋಪಿ ರಿಜ್ವಾನ್ ಕುರೇಶಿ ಹಾಗೂ ಆತನ ಸಹವರ್ತಿ ಅಕಿಲ್ ಎಂಬಾತನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್‌ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ?