Webdunia - Bharat's app for daily news and videos

Install App

ಪತ್ನಿ ಮೇಲಿನ ಸಿಟ್ಟಿಗೆ ಮಲಮಗಳನ್ನು ನದಿಗೆಸೆದ

Webdunia
ಶನಿವಾರ, 2 ಜುಲೈ 2016 (10:18 IST)
ಮಲತಂದೆಯೊಬ್ಬ 6 ವರ್ಷದ ಪುಟ್ಟ ಮಗಳನ್ನು ನದಿಗೆಸೆದ ಹೇಯ ಘಟನೆ ಠಾಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ತುಳಸೀರಾಮ್ ಸೈನಿ(48)  ಬಾಲಕಿಯ ತಾಯಿಯನ್ನು ಮದುವೆಯಾಗಿ ಲೋಕಮಾನ್ಯ ನಗರದಲ್ಲಿ ವಾಸವಾಗಿದ್ದ. ಬುಧವಾರ ಪತಿ ಪತ್ನಿ ನಡುವೆ ಜಗಳ ನಡೆದಿತ್ತು. ಮಗಳು ಏಕ್ತಾಳನ್ನು ಬೈಕ್‌ನಲ್ಲಿ ಕರೆದೊಯ್ದ ಆತ ಪತ್ನಿಯ ಮೇಲಿನ ಕೋಪಕ್ಕೆ ಆಕೆಯನ್ನು ಬದ್ಲಾಪುರದ ಬಳಿ ನದಿಗೆ ಎಸೆದು ಪರಾರಿಯಾಗಿದ್ದಾನೆ.
 
ಪುಟ್ಟ ಬಾಲಕಿ ನೀರಿನಲ್ಲಿದ್ದ ಗಿಡಗಳನ್ನು ಹಿಡಿದುಕೊಂಡು ಬೆಳಗಾಗುವವರೆಗೂ ಕಾದಿದ್ದಾಳೆ. ಆ ಸಮಯದಲ್ಲಿ ಭಾರಿ ಮಳೆ ಆಗುತ್ತಿದ್ದರೂ ಬಾಲಕಿ ಬದುಕುಳಿದಿದ್ದು ಮರುದಿನ ಆಕೆಯನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ದಳದವರನ್ನು ಕರೆದು ಆಕೆಯನ್ನು ರಕ್ಷಿಸಿದ್ದಾರೆ. 
 
ರಾತ್ರಿ ಎಲ್ಲ ಸೊಳ್ಳೆ ಕಡಿತಕ್ಕೆ ಒಳಗಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 
ತನ್ನ ಪತಿ ಮತ್ತು ಮಗಳು ಬುಧವಾರ ರಾತ್ರಿಯಿಂದ ಮನೆಗೆ ಹಿಂತಿರುಗಿರಲಿಲ್ಲ ಎಂದು ಬಾಲಕಿ ತಾಯಿ ಪೊಲೀಸರಲ್ಲಿ ಹೇಳಿದ್ದಾಳೆ. 
 
ಮಗಳು ತಮ್ಮ ಜತೆಗಿರಲು ಇಷ್ಟಪಡದ ಪತಿ ಸದಾ ಈ ಕಾರಣಕ್ಕೆ ಜಗಳವಾಡುತ್ತಿದ್ದ ಎಂದು ಆರೋಪಿ ಪತ್ನಿ ಹೇಳಿದ್ದಾಳೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್‌ ನಡುವಿನ ಸಂಘರ್ಷ: ಇರಾನ್‌ಗೆ ರಫ್ತಾಗದೆ ಭಾರತದಲ್ಲೇ ಉಳಿದ 1ಲಕ್ಷ ಟನ್ ಬಾಸ್ಮತಿ

ಕಾಂಗ್ರೆಸ್ ಪಕ್ಷದವರೇ ಛೀ ಥೂ ಎಂದು ಉಗಿದರೂ ಎಂಥಾ ಭಂಡ ಬಾಳು ಇವರದ್ದು: ಆರ್ ಅಶೋಕ್

ಇರಾನ್‌ಗೆ ದೊಡ್ಡ ಎಚ್ಚರಿಕೆ ನೀಡಿದ ಇಸ್ರೇಲ್‌, ಇರಾನ್ ಸರ್ಕಾರವೇ ಗುರಿ

ರಾಜು ಕಾಗೆಯೇ ಕಾಂಗ್ರೆಸ್ ನ ಭ್ರಷ್ಟಾಚಾರ ಬಯಲು ಮಾಡಿದ್ದಾರೆ: ಬಿವೈ ವಿಜಯೇಂದ್ರ

Video, ಶಾಸಕನ ಜತೆ ರೈಲು ಸೀಟು ವಿನಿಮಯ ಮಾಡಿಕೊಳ್ಳಲು ನಿರಾಕರಣೆ: ರಕ್ತಬರುವ ಹಾಗೇ ಹಿಗ್ಗಾಮುಗ್ಗಾ ಥಳಿಸಿದ ಗುಂಪು

ಮುಂದಿನ ಸುದ್ದಿ
Show comments