Select Your Language

Notifications

webdunia
webdunia
webdunia
webdunia

ಹನ್ನೆಡರ ಬಾಲೆಯ ಮೇಲೆ ಕೀಚಕ ಕೃತ್ಯ

ಹನ್ನೆಡರ ಬಾಲೆಯ ಮೇಲೆ ಕೀಚಕ ಕೃತ್ಯ
ಬಾಗ್ಪತ್ , ಮಂಗಳವಾರ, 26 ಆಗಸ್ಟ್ 2014 (07:42 IST)
12 ವರ್ಷದ ಪುಟ್ಟ ಪಾಲಕಿಯೊಬ್ಬಳು ತನ್ನ ನೆರೆಮನೆಯಾತನಿಂದ ಅತ್ಯಾಚಾರಕ್ಕೀಡಾದ ಘಟನೆ ಬಾಗ್ಪತ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. 

ಬರೋಟಾ ಪ್ರದೇಶದ ಸ್ಲಂವೊಂದರಲ್ಲಿ ವಾಸಿಸುವ ಹುಡುಗಿಯ ಕುಟುಂಬದ ಸದಸ್ಯರು ಕೂಲಿ ಕೆಲಸಕ್ಕೆ ಹೋದಾಗ ಈ ಘಟನೆ ನಡೆದಿದೆ. 
 
ಮನೆಯಲ್ಲಿ ಹುಡುಗಿ ಬಿಟ್ಟು ಇನ್ಯಾರೂ ಇಲ್ಲದುದನ್ನು ಕಂಡುಕೊಂಡ  ಕೀಚಕ ಮನಸ್ಥಿತಿಯ ಯುವಕ  ಬಲವಂತವಾಗಿ ಮನೆಯೊಳಗೆ ನುಗ್ಗಿ  ಆಕೆಯನ್ನು ಹೊಡೆದು ಹಿಂಸಿಸಿ ನಂತರ ಅತ್ಯಾಚಾರವೆಸಗಿದ್ದಾನೆ. 
 
ಬಾಲಕಿ ಮತ್ತು ಆಕೆಯ ಮನೆಯವರ ಹೇಳಿಕೆಯ ಮೆರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. 

Share this Story:

Follow Webdunia kannada