Webdunia - Bharat's app for daily news and videos

Install App

ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ತಾಯಿ, ಅಕ್ಕ , ಭಾವ

Webdunia
ಶುಕ್ರವಾರ, 19 ಸೆಪ್ಟಂಬರ್ 2014 (12:19 IST)
ಹಣದ ಲಾಲಸೆಗೊಳಗಾಗಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ತಾಯಿ, ಅಕ್ಕ ಮತ್ತು ಭಾವನೇ ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ ಹೇಯ ಘಟನೆ ಹೈದರಾಬಾದ್‌ನಲ್ಲಿ ವರದಿಯಾಗಿದೆ

ಅವರ ಈ ದುರುದ್ದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಬಾಲಕಿ ಯಕಟಪುರದಲ್ಲಿನ ತನ್ನ ನಿವಾಸದಿಂದ ತಪ್ಪಿಸಿಕೊಂಡು, ಸಿವಿಲ್ ಲಿಬರ್ಟೀಸ್ ಪೀಪಲ್ಸ್ ಯೂನಿಯನ್ ಎಂಬ ಸ್ವಯಂಸೇವಾ ಸಂಸ್ಥೆಯ ಸಹಾಯದೊಂದಿಗೆ ಪೋಲಿಸರಿಗೆ ದೂರು ನೀಡಿದ್ದಾಳೆ ಎಂದು ಪೋಲಿಸ್ ಅಧಿಕಾರಿ ಎಮ್. ಸುರೇಂದರ್ ತಿಳಿಸಿದ್ದಾರೆ. 
 
ತನ್ನ ತಾಯಿ, ಹಿರಿಯ ಅಕ್ಕ ಮತ್ತು ಭಾವ ಮೊಹಮ್ಮದ್ ಅಕ್ಬರ್ ನನ್ನನ್ನು  ವೇಶ್ಯಾವಾಟಿಕೆ ದಂಧೆಯಲ್ಲಿ ಪಾಲ್ಗೊಳ್ಳಲು ಒತ್ತಡ ಹೇರಿದ್ದರು ಎಂದು ನೊಂದ ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. 
 
ಐಪಿಸಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದ್ದು , ಅನೈತಿಕ ಸಾಗಾಣಿಕೆ ಕಾಯಿದೆ ಮತ್ತು ಮಕ್ಕಳ ರಕ್ಷಣೆಯ ಲೈಂಗಿಕ ಅಪರಾಧಗಳ (POCSO) ಕಾಯಿದೆಯಡಿ  ಮೂವರು  ಆರೋಪಿಗಳ ಮೇಲೆ ಆರೋಪ ದಾಖಲಿಸಲಾಗಿದೆ. 
 
ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
 
ಕಳೆದ ಒಂದು ವರ್ಷದಿಂದ  ತಾಯಿ,ಅಕ್ಕ, ಭಾವ ನನ್ನನ್ನು ವೇಶ್ಯಾವಾಟಿಕೆ ಮಾಡುವಂತೆ ಒತ್ತಡ ಹೇರಿದರು ಮತ್ತು ನನ್ನನ್ನು ಗೋವಾ, ಪುಣಾ, ಮುಂಬೈ ಮತ್ತು ಹೈದರಾಬಾದಿನ ಅನೇಕ ಕಡೆಗಳಿಗೆ ಕಳುಹಿಸಿದರು. ಅಲ್ಲದೇ ನನ್ನ ಮೇಲೆ ಹಲ್ಲೆ ಕೂಡ ನಡೆಸಿದರು ಎಂದು ಪೀಡಿತ ಬಾಲಕಿ ನೋವು ತೋಡಿಕೊಂಡಿದ್ದಾಳೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments