Select Your Language

Notifications

webdunia
webdunia
webdunia
webdunia

ಸಚಿವರ ಚಹಾ-ಪಾನಿ ವೆಚ್ಚ ಕೇವಲ 73 ಲಕ್ಷ ರೂಪಾಯಿಗಳು ಅಂದ್ರೆ ನಂಬುತ್ತೀರಾ?

ಸಚಿವರ ಚಹಾ-ಪಾನಿ ವೆಚ್ಚ ಕೇವಲ 73 ಲಕ್ಷ ರೂಪಾಯಿಗಳು ಅಂದ್ರೆ ನಂಬುತ್ತೀರಾ?
ಡೆಹರಾಡೂನ್(ಉತ್ತರಾಖಂಡ್) , ಗುರುವಾರ, 30 ಜುಲೈ 2015 (18:53 IST)
ಉತ್ತರಾಖಂಡ್ ಸರಕಾರದ ಸಚಿವರು ಮತ್ತು ಅಧಿಕಾರಿಗಳು ಕುಡಿದ ಚಹಾ-ಸ್ನ್ಯಾಕ್ಸ್ ಮೊತ್ತ ಮಾಸಿಕ 73 ಲಕ್ಷ ರೂಪಾಯಿಗಳಾಗಿವೆ ಎಂದು ಮೂಲಗಳು ತಿಳಿಸಿವೆ.
 
ದಿನೇಶ್ ಅಗರ್‌ವಾಲ್ ಚಹಾ ಮತ್ತು ಸ್ನ್ಯಾಕ್ಸ್‌ಗಳಿಗಾಗಿ ಎರಡು ವರ್ಷದ ಅವಧಿಯಲ್ಲಿ ಸರಕಾರದ 9 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ಅಗ್ರಸ್ಥಾನದಲ್ಲಿದ್ದಾರೆ. ಸರಕಾರ ಮೂರು ವರ್ಷಗಳ ಅವಧಿಯಲ್ಲಿ ಸಚಿವರ ಚಹಾ-ಸ್ನ್ಯಾಕ್ಸ್‌ಗಳಿಗಾಗಿ 73 ಲಕ್ಷ ರೂಪಾಯಿಗಳನ್ನು ವೆಚಚ್ ಮಾಡಿದೆ. 
 
ಆರ್‌ಟಿಐ ಮಾಹಿತಿ ಅನ್ವಯ ಸಚಿವರು ಯಾವುದೇ ರೀತಿಯ ನಾಚಿಕೆಯಿಲ್ಲದೇ ಚಹಾ ಮತ್ತು ಸ್ನ್ಯಾಕ್ಸ್‌ಗಳಿಗಾಗಿ ವೆಚ್ಚ ಮಾಡುತ್ತಿದ್ದಾರೆ,ಸಚಿವ ಪ್ರೀತಮ್ ಪವಾರ್ 8 ಲಕ್ಷ ರೂಪಾಯಿಗಳ ವೆಚಚ್ ಮಾಡಿದ್ದರೆ ಮತ್ತೊಬ್ಬ ಸಚಿವ ಸುರೇಂದ್ರ ರಾಕೇಶ್ 7.77 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. 
 
ಮತ್ತೊಬ್ಬ ಸಚಿವ ಪ್ರೀತಮ್ ಸಿಂಗ್ 7 ಲಕ್ಷ ರೂಪಾಯಿಗಳನ್ನು ವೆಚಚ್ ಮಾಡಿದ್ದರೆ, ಪ್ರಸಾದ್ ನೈಥಾನಿ 6.80 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. 
 
ಸಚಿವರಿಗೆ ಈ ಕುರಿತು ಸುದ್ದಿಗಾರರು ಪ್ರಶ್ನೆ ಕೇಳಿದಾಗ, ಜನರು ಮತ್ತು ಅಧಿಕಾರಿಗಳು ಸಮಸ್ಯೆಗಳನ್ನು ತೆಗೆದುಕೊಂಡು ನಮ್ಮ ಬಳಿಗೆ ಬಂದಾಗ ಚಹಾ-ಸ್ನ್ಯಾಕ್ಸ್ ವ್ಯವಸ್ಥೆಯನ್ನು ಮಾಡಬೇಕಾಗಿರುವುದರಿಂದ ವೆಚ್ಚ ಹೆಚ್ಚಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
 

Share this Story:

Follow Webdunia kannada