ಭಾರತೀಯ ಕ್ರಿಕೆಟ್ ತಂಡದಲ್ಲಿ ದಲಿತರಿಗೆ ಮೀಸಲಾತಿ ಕೋಟಾ ಇರಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಶಕ್ತಿಕರಣ ಇಲಾಖೆಯ ಕೇಂದ್ರ ರಾಜ್ಯ ಸಚಿವ ರಾಮದಾಸ್ ಅಠವಾಲೆ ಕೋರಿದ್ದಾರೆ.
ಟೀಂ ಇಂಡಿಯಾದಲ್ಲಿ ದಲಿತರಿಗೆ ಮೀಸಲಾತಿ ನೀಡಿದಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ತಂಡ ಹಲವಾರು ಬಾರಿ ಸೋಲನುಭವಿಸಿದೆ. ತಂಡ ನಿರಂತರವಾಗಿ ಗೆಲ್ಲಲು ದಲಿತರಿಗೆ ಮೀಸಲಾತಿಯಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಪ್ರಧಾನಮಂತ್ರಿ ಮೋದಿಯ ಕಾರ್ಯವೈಖರಿಗೆ ಹೋಲಿಸಿದ ಅವರು, ಪ್ರಸ್ತುತ ವಿರಾಟ್ ಕೊಹ್ಲಿ ತಂಡ ಪ್ರಧಾನಿ ಮೋದಿಯ ತಂಡದಂತೆ ಉತ್ತಮ ಫಾರ್ಮ್‌ನಲ್ಲಿದೆ ಎಂದು ತಿಳಿಸಿದ್ದಾರೆ.
ಸಚಿವ ರಾಮದಾಸ್ ಅಠವಾಲೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಪನ್ನಾ ಲಾಲ್ ಪೂನಿಯಾ, ಬಿಜೆಪಿ ಮತ್ತೊಮ್ಮೆ ಬೇಜವಾಬ್ದಾರಿ ಹೇಳಿಕೆ ನೀಡಿದೆ ಟೀಂ ಇಂಡಿಯಾ ತಂಡದಲ್ಲಿ ದಲಿತರಿಗೆ ಮೀಸಲಾತಿ ನೀಡಿದಲ್ಲಿ ಸ್ಥಾನ ದೊರೆಯುತ್ತದೆ ಎನ್ನುವುದು ಖಚಿತವಿಲ್ಲ. ಆದ್ದರಿಂದ ದಲಿತ ಕ್ರಿಕೆಟಿಗರಿಗೆ ತರಬೇತಿ, ಅಭ್ಯಾಸ ಪಂದ್ಯಗಳನ್ನಾಡುವ ಅವಕಾಶ ನೀಡಬೇಕು. ಆದರೆ,ತಂಡಕ್ಕೆ ಆಯ್ಕೆಯಾಗುವಾಗ ಮಾತ್ರ ಅತ್ಯುತ್ತಮ ಪ್ರದರ್ಶನದ ಮೇಲೆ ಅವಲಂಬನೆಯಾಗಿರಬೇಕು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.