Select Your Language

Notifications

webdunia
webdunia
webdunia
webdunia

ಮತ್ತೆ ಉಗ್ರರ ಅಟ್ಟಹಾಸ: ಮೂವರು ಯೋಧರಿಗೆ ಗಾಯ

ಮತ್ತೆ ಉಗ್ರರ ಅಟ್ಟಹಾಸ: ಮೂವರು ಯೋಧರಿಗೆ ಗಾಯ
ಪಂಜಾಬ್ , ಶನಿವಾರ, 11 ಏಪ್ರಿಲ್ 2015 (12:26 IST)
ಉಗ್ರರು ಮತ್ತೆ ತಮ್ಮ ಅಟ್ಟಹಾಸ ಮೆರೆಯುತ್ತಿದ್ದು, ಇಂದು ಬೆಳಗ್ಗೆ ಇಲ್ಲಿನ ಅಟಾರಿ ಪ್ರದೇಶದಲ್ಲಿ ಬಿಎಸ್ಎಫ್ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
 
ಈ ಘಟನೆಯು ಇಂದು ಬೆಳಗ್ಗೆ ಪಂಜಾಬ್ ರಾಜ್ಯದ ಭಾರತ ಮತ್ತು ಪಾಕ್ ನಡುವಿನ ಅಂತಾರಾಷ್ಟ್ರೀಯ ಗಡಿ ರೇಖೆಯಾಗಿರುವ ಅಟಾರಿ ಪ್ರದೇಶದಲ್ಲಿ ನಡೆದಿದ್ದು, ಬಿಎಸ್ಎಫ್ ಯೋಧರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಲು ಯೋಧರು ಮುಂದಾದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. 
 
ಇನ್ನು ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಅಟ್ಟಹಾಸ ಮೆರೆದಿದ್ದ ಉಗ್ರರು, ಕಟ್ಟಡವೊಂದರಲ್ಲಿ ಅಡಗಿ ಕುಳಿತು ಸ್ವದೇಶಿ ರಕ್ಷಣಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅಲ್ಲದೆ 24 ಗಂಟೆಯ ಒಳಗೆ ಪೊಲೀಸರ ಮೇಲೆ ಇತರೆ ಎರಡು ಕಡೆ ದಾಳಿ ನಡೆಸಿ ಮೂವರು ಪೊಲೀಸರನ್ನು ಗಾಯಗೊಳಿಸಿದ್ದರು.   

Share this Story:

Follow Webdunia kannada