Select Your Language

Notifications

webdunia
webdunia
webdunia
webdunia

ಹೈದರಾಬಾದ್‌ನಲ್ಲಿ ಲಘು ಭೂಕಂಪ

ಹೈದರಾಬಾದ್‌ನಲ್ಲಿ ಲಘು ಭೂಕಂಪ
ಹೈದರಾಬಾದ್ , ಶನಿವಾರ, 24 ಜನವರಿ 2015 (10:32 IST)
ಕಳೆದ ರಾತ್ರಿ 11 ಗಂಟೆಗೆ ಹೈದ್ರಾಬಾದ್​​ನ ಹಲವಾರು ಕಡೆಗಳಲ್ಲಿ ಲಘು ಭೂಕಂಪದ ಅನುಭವವಾಗಿದ್ದು, ರಿಕ್ಟರ್‌ ಮಾಪಕದಲ್ಲಿ ಇದರ ತೀವ್ರತೆ 1.8 ಪ್ರಮಾಣದಲ್ಲಿ ದಾಖಲಾಗಿದೆ.
ರಾತ್ರಿ 10.30 ರ ಸುಮಾರಿಗೆ ಜುಬ್ಲೀ ಹಿಲ್ಸ್ ಥೋವ್ಲಿಚೌಕಿ,ರಾಜೇಂದ್ರ ನಗರ, ಪಹಡಿ ಶರೀಫ್  ಮತ್ತು ಹಳೆಯ ನಗರದ ಹಲವು ಕಡೆಗಳಲ್ಲಿ ಪ್ರಥಮ ಕಂಪನದ ಅನುಭವವಾಯಿತು ಎಂದು ಸ್ಥಳೀಯ ನಿವಾಸಿಗಳೊಬ್ಬರು ತಿಳಿಸಿದ್ದಾರೆ. 
 
ನಗರದ ಹಲವು ಪ್ರದೇಶಗಳಲ್ಲಿ ಬಾಗಿಲು, ಕಿಟಕಿ, ಕಟ್ಟಡಗಳು 4 ರಿಂದ 5 ಸೆಕೆಂಡುಗಳು ಕಂಪಿಸಿದಂತಾಗಿದೆ ಎಂದು ತಿಳಿದು ಬಂದಿದೆ
 
ಆತಂಕಗೊಂಡ ಜನ ತಕ್ಷಣಕ್ಕೆ ಮನೆಯಿಂದ ಹೊರಗೆ ಓಡಿ ಬಂದು, ಇಡೀ ರಾತ್ರಿ ಭಯದಲ್ಲಿ ಕಾಲ ಕಳೆದಿದ್ದಾರೆ. ಯಾವುದೇ ಪ್ರಾಣ ಹಾನಿ, ಆಸ್ತಿ ನಷ್ಟವಾಗಿಲ್ಲ ಎಂದು ವರದಿಯಾಗಿದೆ.

Share this Story:

Follow Webdunia kannada