Select Your Language

Notifications

webdunia
webdunia
webdunia
webdunia

ದಾವೂದ್ ಭಾರತಕ್ಕೆ ಮರಳಲು ಬಯಸಿದ್ದ , ಶರದ್ ಪವಾರ್ ಒಪ್ಪಲಿಲ್ಲ: ರಾಮ್ ಜೇಠ್ಮಲಾನಿ

ದಾವೂದ್ ಭಾರತಕ್ಕೆ ಮರಳಲು ಬಯಸಿದ್ದ , ಶರದ್ ಪವಾರ್ ಒಪ್ಪಲಿಲ್ಲ: ರಾಮ್ ಜೇಠ್ಮಲಾನಿ
ನವದೆಹಲಿ , ಶನಿವಾರ, 4 ಜುಲೈ 2015 (18:00 IST)
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮರಳಲು ಬಯಸಿದ್ದ. ಆದರೆ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಶರದ್ ಪವಾರ್ ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಖ್ಯಾತ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಶನಿವಾರ ಹೇಳಿದ್ದಾರೆ. ತಾವು ಲಂಡನ್‌ನಲ್ಲಿ ಆತನನ್ನು ಭೇಟಿ ಮಾಡಿದ್ದೆ, ಆಗ ಸ್ವತಃ ದಾವೂದ್ ಈ ವಿಷಯವನ್ನು ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ. 

ಆದರೆ ಲಂಡನ್‌ನಲ್ಲಿ ತಾವು ದಾವೂದ್ ಸಹಚರ ಚೋಟಾ ಶಕೀಲ್‌ನನ್ನು ಭೇಟಿಯಾಗಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಅವರು ತಳ್ಳಿ ಹಾಕಿದ್ದಾರೆ. 
 
ದಾವೂದ್ ಭಾರತೀಯ ಅಧಿಕಾರಿಗಳ ಬಳಿ ಶರಣಾಗುವ ಕುರಿತು ಪ್ರಸ್ತಾಪಿಸಿದ್ದ. ಆದರೆ ಅಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಆತನ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಲಿಲ್ಲ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಜೇಠ್ಮಲಾನಿ ಹೇಳಿದ್ದಾರೆ.
 
"ಆದರೆ ದಾವೂದ್ ನೀಡಿದ್ದ ಪ್ರಸ್ತಾವವನ್ನು ಒಪ್ಪುವುದು ಕೇವಲ ಪವಾರ್ ಅಧಿಕಾರದಡಿಯಲ್ಲಿ ಇರಲಿಲ್ಲ. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರವು ಸಹ ಅದಕ್ಕೆ ಜವಾಬ್ದಾರವಾಗಿತ್ತು", ಎಂದು ಅವರು ತಿಳಿಸಿದ್ದಾರೆ. 
 
ದಾವೂದ್ ಶರಣಾಗಲು ತಯಾರಾಗಿದ್ದ. ಆದರೆ ವಿಚಾರಣೆ ವೇಳೆ ನಮ್ಮನ್ನು ಗೃಹಬಂಧನದಲ್ಲಿ ಇರಿಸಬೇಕು ಎಂದು ಷರತ್ತನ್ನು ಮುಂದಿಟ್ಟಿದ್ದ. ಜೈಲುವಾಸದ ಭಯ ಆತನನ್ನು ತೀವೃವಾಗಿ ಬಾಧಿಸುತ್ತಿತ್ತು ಎಂದು ಜೇಠ್ಮಲಾನಿ ತಮ್ಮ ಮತ್ತು ದಾವೂದ್ ನಡುವೆ ನಡೆದ ಮಾತುಕತೆಗಳನ್ನು ಮೆಲುಕು ಹಾಕಿದ್ದಾರೆ.
 
'ತಾನು 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ದಾವೂದ್ ಇಬ್ರಾಹಿಂ ದೂರವಾಣಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದ್ದ. ತಾನು ಶರಣಾದರೆ ಪೊಲೀಸರು ಚಿತ್ರಹಿಂಸೆ ( ಥರ್ಡ್ ಡಿಗ್ರಿ ಟಾರ್ಚರ್) ನೀಡಬಾರದು ಎಂದು ಭಾರತೀಯ ಅಧಿಕಾರಿಗಳು ಗ್ಯಾರಂಟಿ ನೀಡಬೇಕೆಂದು ಷರತ್ತು ಹಾಕಿದ್ದಾಗಿ ಆತ ನನಗೆ ತಿಳಿಸಿದ್ದ', ಹಿರಿಯ ವಕೀಲರು ಹೇಳಿದ್ದಾರೆ. 
 
ಭೂಗತ ಪಾತಕಿ ದಾವೂದ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದು ಆತನನ್ನು ಬಂಧಿಸಿ ಭಾರತಕ್ಕೆ ತರಲು ಸರ್ಕಾರ ಕಟಿಬದ್ಧ ಎಂದು ನರೇಂದ್ರ ಮೋದಿ ಸರ್ಕಾರ ಪದೇ ಪದೇ ಹೇಳುತ್ತಿದೆ.
 
ಆದರೆ ಪಾಕ್ ಆತ ತನ್ನ ನೆಲದಲ್ಲಿಲ್ಲ ಎಂದು ವಾದಿಸುತ್ತಿದೆ. 

Share this Story:

Follow Webdunia kannada