ಡ್ರಾಪ್ ಕೊಡುವುದಾಗಿ 19 ವರ್ಷದ ಯುವತಿ ಮತ್ತು ಆಕೆಯ ಸಹೋದರನನ್ನು ಕಾರಿಗೆ ಹತ್ತಿಸಿಕೊಂಡ ಆರೋಪಿಗಳು ನಂತರ ಸಹೋದರನ ಪರ್ಸ್ ಮತ್ತು ಮೊಬೈಲ್ ಕಸಿದುಕೊಂಡು ಹೊರಗೆ ಹಾಕಿದ ಘಟನೆ ವರದಿಯಾಗಿದೆ.
ಯುವತಿಯ ಸಹೋದರ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ 19 ವರ್ಷದ ಯುವತಿಯನ್ನು ಅಪಹರಿಸಿದ ಮೂವರು ಆರೋಪಿಗಳನ್ನು ಸುಮಾರು ಆರು ಕಿ.ಮೀಗಳ ದೂರದಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಯುವತಿ ಮತ್ತು ಆಕೆಯ ಸಹೋದರ ವಜೀರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿರುವಾಗ ಹತ್ತಿರದಲ್ಲಿಯೇ ಬಂದ ಕಾರೊಂದು ಬಂದು ನಿಂತಿದೆ. ಕಾರಿನ ಚಾಲಕ ವಿಳಾಸವನ್ನು ಕೇಳಿದಾಗ ಸಹೋದರ ಮಾಹಿತಿ ನೀಡಿದ್ದಾನೆ.
ತಾವು ಅದೇ ಮಾರ್ಗದಲ್ಲಿ ತೆರಳುತ್ತಿರುವುದಾಗಿ ತಿಳಿಸಿ ಕಾರು ಹತ್ತುವಂತೆ ಯುವತಿ ಮತ್ತು ಆಕೆಯ ಸಹೋದರನಿಗೆ ಮನವಿ ಮಾಡಿದ್ದಾನೆ ಎನ್ನಲಾಗಿದೆ.
ಯುವತಿ ಮತ್ತು ಆಕೆಯ ಸಹೋದರ ಕಾರಿನಲ್ಲಿ ಕುಳಿತಕೊಂಡ ಕೂಡಲೇ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಸಹೋದರನ ಪರ್ಸ್ ಕಸಿದುಕೊಂಡು ಹೊರಹಾಕಿ, ಆತನ ಸಹೋದರಿಯೊಂದಿಗೆ ಪರಾರಿಯಾಗಿದ್ದಾರೆ.
ಆರೋಪಿಗಳನ್ನು ಸಚಿನ್ ಚೌಧರಿ(32)ಶಿವಕುಮಾರ್(32) ಮತ್ತು ಸೌರಭ ಎಂದು ಗುರುತಿಸಲಾಗಿದ್ದು, ಆರೋಪಿಗಳ ವಿರುದ್ಧ ಅಪಹರಣ, ದರೋಡೆ ಮತ್ತು ಅಪರಾಧಿಕ ದೌರ್ಜನ್ಯದಡಿ ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.